12 Aug 2024
Pic credit: Google
Vijayasarathy SN
ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೋಗಲು ಬಯಸುವ ಭಾರತೀಯರ ಸಂಖ್ಯೆ ಹೆಚ್ಚು. ಓದಲು ಅಮೆರಿಕಕ್ಕೆ ಹೋಗಬೇಕಾದರೆ ಸ್ಟುಡೆಂಟ್ ವೀಸಾ ಅಥವಾ ಎಫ್1 ವೀಸಾ ಅಥವಾ ಎಂ ವೀಸಾ ಅವಶ್ಯಕವಾಗಿರುತ್ತದೆ.
Pic credit: Google
ಅಮೆರಿಕದಲ್ಲಿ ಮೊದಲು ನೀವು ಯಾವುದಾದರೂ ಯೂನಿವರ್ಸಿಟಿ ಅಥವಾ ಕಾಲೇಜಿಗೆ ದಾಖಲಾಗಬೇಕು. ಆನ್ಲೈನ್ನಲ್ಲಿ ನೀವು ಅಡ್ಮಿಶನ್ ಪಡೆಯಬಹುದು. ಅದಾದ ಬಳಿಕವಷ್ಟೇ ನೀವು ವೀಸಾಗೆ ಅರ್ಜಿ ಹಾಕಬಹುದು.
Pic credit: Google
ಎಫ್1 ವೀಸಾವನ್ನು 365 ದಿನಗಳವರೆಗೆ ಪಡೆಯಬಹುದು. ಕೋರ್ಸ್ ಆರಂಭಕ್ಕೆ 30ಕ್ಕೂ ಹೆಚ್ಚು ದಿನಗಳ ಮುಂಚೆಯೇ ನೀವು ಅಮೆರಿಕಕ್ಕೆ ಹೋಗಬೇಕೆಂದಿದ್ದರೆ ಅದಕ್ಕೆ ವಿಸಿಟರ್ ವೀಸಾಗೆ ಪ್ರತ್ಯೇಕವಾಗಿ ಅರ್ಜಿ ಹಾಕಬೇಕು.
Pic credit: Google
ಎಫ್1 ವೀಸಾಗೆ ಅರ್ಜಿ ಶುಲ್ಕ 185 ಡಾಲರ್ ಇದೆ. ಸುಮಾರು 15,000 ರೂನಷ್ಟು ಅಪ್ಲಿಕೇಶನ್ ಫೀಸ್. ಇದನ್ನು ವೀಸಾ ಸಂದರ್ಶನಕ್ಕೆ ಮುನ್ನ ಪಾವತಿಸಬೇಕು. ಇದು ನಾನ್ ರೀಫಂಡಬಲ್ . ಅಂದರೆ, ವೀಸಾ ಸಿಗದಿದ್ದರೆ ಈ ಹಣ ಮರಳುವುದಿಲ್ಲ.
Pic credit: Google
ನೀವು ಅಮೆರಿಕದಲ್ಲಿ ಯಾವ ನಗರದಲ್ಲಿ ಉಳಿದುಕೊಳ್ಳುತ್ತೀರಿ ಅಲ್ಲಿಯ ಜೀವನವೆಚ್ಚ, ಯಾವ ಕಾಲೇಜಿನಲ್ಲಿ ಎಷ್ಟು ಅವಧಿ ಓದುತ್ತೀರಿ, ಫೀಸು ಮತ್ತಿತರ ಖರ್ಚುವೆಚ್ಚಕ್ಕೆ ನಿಮ್ಮಲ್ಲಿ ಸಾಕಷ್ಟು ಹಣ ಇದ್ದರೆ ಮಾತ್ರವೇ ನಿಮಗೆ ವೀಸಾ ಸಿಗುತ್ತದೆ.
Pic credit: Google
ವೀಸಾ ಇಂಟರ್ವ್ಯೂನಲ್ಲಿ ನೀವು ಈ ಕೆಳಗಿನ ದಾಖಲೆ ತೆಗೆದುಕೊಂಡು ಹೋಗಬೇಕು: ಪಾಸ್ಪೋರ್ಟ್, ಡಿಎಸ್160 ಅರ್ಜಿ, ಐ20 ಅರ್ಜಿ, ಶುಲ್ಕ ಪಾವತಿ ಸ್ವೀಕೃತಿ, ಫೋಟೋ, ಅಡ್ಮಿಶನ್ ದಾಖಲೆ ಇತ್ಯಾದಿ ಇರಬೇಕು.
Pic credit: Google
ಓದಿನ ಖರ್ಚು, ಜೀವನ ನಿರ್ವಹಣೆಯ ಖರ್ಚು ಇದಕ್ಕೆಲ್ಲಾ ನಿಮ್ಮ ಬಳಿ ಹಣ ಇರುವುದಕ್ಕೆ ಆಧಾರ ಒದಗಿಸಬೇಕು. ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಸಾಲ ಅಥವಾ ವಿದ್ಯಾರ್ಥಿವೇತನ, ಅಥವಾ ಪ್ರಾಯೋಜಕತ್ವ ಇತ್ಯಾದಿ ದಾಖಲೆಗಳನ್ನು ನೀವು ಒದಗಿಸಬೇಕು.
Pic credit: Google