11 Aug 2024
Pic credit: Google
Vijayasarathy SN
2024ರ ಬಾರ್ಕ್ಲೇಸ್ ಪ್ರೈವೇಟ್ ಕ್ಲೈಂಟ್ಸ್ ಹುರುನ್ ಇಂಡಿಯಾ ಮೋಸ್ಟ್ ವ್ಯಾಲ್ಯುವಬಲ್ ಫ್ಯಾಮಿಲಿ ಬಿಸಿನೆಸ್ಗಳ ಪಟ್ಟಿ ಮಾಡಿದೆ. ಟಾಪ್ 10 ಕುಟುಂಬಗಳ ಒಟ್ಟು ಆಸ್ತಿಮೌಲ್ಯ 60 ಲಕ್ಷ ಕೋಟಿ ರೂಗೂ ಹೆಚ್ಚು.
Pic credit: Google
ಭಾರತದ ಅತಿ ಶ್ರೀಮಂತ ಫ್ಯಾಮಿಲಿ ಬಿಸಿನೆಸ್ ಅಂಬಾನಿ ಕುಟುಂಬದ್ದಾಗಿದೆ. ಒಟ್ಟು ಆಸ್ತಿ 25.75 ಲಕ್ಷ ಕೋಟಿ ರೂ ಇದೆ. ಮುಕೇಶ್ ಅಂಬಾನಿ ಅವರ ಮೂವರು ಮಕ್ಕಳು ಈ ಬಿಸಿನೆಸ್ ಮುಂದುವರಿಸುತ್ತಿದ್ದಾರೆ.
Pic credit: Google
ನೀರಜ್ ಬಜಾಜ್ ಅವರ ಕುಟುಂಬದ ಬಳಿ ಇರುವ ಒಟ್ಟು ವ್ಯವಹಾರದ ಮೌಲ್ಯ 7.13 ಲಕ್ಷ ಕೋಟಿ ರೂ. 1926ರಿಂದ ಶುರುವಾದ ಈ ಬಿಸಿನೆಸ್ ಈಗ ಮೂರನೇ ತಲೆಮಾರಿನ ಕುಟುಂಬದ ಸದಸ್ಯರು ನಿರ್ವಹಣೆ ಮಾಡುತ್ತಿದ್ದಾರೆ.
Pic credit: Google
ಬಿರ್ಲಾ ಕುಟುಂಬ ಭಾರತದ ಮೂರನೇ ಅತಿಶ್ರೀಮಂತ ಫ್ಯಾಮಿಲಿ ಆಗಿದೆ. ಇವರ ಬಳಿ 5.38 ಲಕ್ಷ ಕೋಟಿ ರೂ ಮೌಲ್ಯದ ಬಿಸಿನೆಸ್ ಇದೆ. ಮೈನಿಂಗ್ನಿಂದ ಹಿಡಿದು ಎನ್ಬಿಎಫ್ಸಿವರೆಗೆ ವಿವಿಧ ಬಿಸಿನೆಸ್ಗಳನ್ನು ಈ ಕುಟುಂಬದವರು ನಿರ್ವಹಿಸುತ್ತಿದ್ದಾರೆ.
Pic credit: Google
ಮೈನಿಂಗ್, ಉಕ್ಕು ತಯಾರಿಕೆ ಇತ್ಯಾದಿ ವಿವಿಧ ಉದ್ದಿಮೆಗಳನ್ನು ಹೊಂದಿರುವ ಜಿಂದಾಲ್ ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದು. ಈ ಕುಟುಂಬದ ಎರಡನೇ ತಲೆಮಾರಿನ ವ್ಯಕ್ತಿಗಳು ಈಗ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.
Pic credit: Google
ಎಚ್ಸಿಎಲ್ ಟೆಕ್ನಾಲಜೀಸ್ನ ಸಂಸ್ಥಾಪಕರಾದ ಶಿವ್ ನಾದರ್ ಅವರ ಕುಟುಂಬದ ಆಸ್ತಿಮೌಲ್ಯ 4.30 ಲಕ್ಷ ಕೋಟಿ ರೂ. ಶಿವ್ ನಾದರ್ ಅವರ ಮಗಳು ರೋಷನಿ ನಾದರ್ ಈಗ ಈ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ.
Pic credit: Google
ಅದಾನಿ, ಮಹೀಂದ್ರ, ಚೋಕ್ಸಿ, ಪ್ರೇಮ್ಜಿ, ಮುರುಗಪ್ಪ, ಪೂನಾವಾಲ ಫ್ಯಾಮಿಲಿ ಇತರ ಹೆಸರಾಂತ ಬಿಸಿನೆಸ್ ಕುಟುಂಬಗಳೆನಿಸಿವೆ. ಡಿಎಲ್ಎಫ್ನ ರಾಜೀವ್ ಸಿಂಗ್ ಅವರ ಕುಟುಂಬವೂ ಶ್ರೀಮಂತ ಎನಿಸಿದೆ.
Pic credit: Google