ಅಮೆರಿಕದಿಂದ ಭಾರತಕ್ಕೆ ಬಂದು ಜಂಗಲ್ ಬೌಂಡ್ ಕಟ್ಟಿದ ಪ್ರತೀಕ್ಷಾ
09 Aug 2024
Pic credit: Insta
Vijayasarathy SN
ಅಮೆರಿಕದಲ್ಲಿ ಒಳ್ಳೆಯ ಸಂಬಳದ ಕೆಲಸ ಪಡೆದು ಆರಾಮವಾಗಿ ಜೀವನ ಸವೆಸಬೇಕೆಂದು ಬಯಸುವ ಭಾರತೀಯರ ಕಾಲ ಮುಗಿಯಿತು. ಇನ್ನೇನಿದ್ದರೂ ಪ್ರತೀಕ್ಷಾರಂಥ ಯುವಜನರ ಕಾಲ.
Pic credit: Insta
ಪುಣೆಯ ಪ್ರತೀಕ್ಷಾ ಶೆಲ್ಕೆ ಅಮೆರಿಕದಲ್ಲಿ ಎಂಜಿನಿಯರ್ ಆಗಿದ್ದವರು. ತಿಂಗಳಿಗೆ ನಾಲ್ಕೂವರೆ ಲಕ್ಷ ರೂ ಸಂಬಳ ಪಡೆಯುತ್ತಿದ್ದವರು. ಆ ಕೆಲಸ ಬಿಟ್ಟು ಮನಸಿಗೆ ಇಷ್ಟವಾದ ಬಿಸಿನೆಸ್ ಕಟ್ಟಿದ್ದಾರೆ ತವರಿನಲ್ಲಿ.
Pic credit: Insta
ಮಹಾರಾಷ್ಟ್ರದ ಪುಣೆಯಲ್ಲಿ ಪ್ರತೀಕ್ಷಾ ಶೆಲ್ಕೆ ಅವರು ಜಂಗಲ್ ಬೌಂಡ್ ಎನ್ನುವ ಕಂಪನಿ ಸ್ಥಾಪಿಸಿದ್ದಾರೆ. ಮರ, ಬಿದಿರಿನಿಂದ ಮಾಡಿದ ಪರಿಸರಸ್ನೇಹಿ ಉತ್ಪನ್ನಗಳನ್ನು ಇವರ ಕಂಪನಿ ತಯಾರಿಸಿ ಮಾರುತ್ತದೆ.
Pic credit: Insta
ಕಚೇರಿಗಳಲ್ಲಿ ಬಳಸುವ ಕೆಲ ವಸ್ತುಗಳು, ಗೃಹಬಳಕೆ ವಸ್ತುಗಳು, ಕಾರ್ಪೊರೇಟ್ ಗಿಫ್ಟ್ಗಳು, ಲ್ಯಾಪ್ಟಾಪ್ ಸ್ಟ್ಯಾಂಡ್, ಮೊಬೈಲ್ ಸ್ಟ್ಯಾಂಡ್, ಸ್ಪೀಕರ್ ಇತ್ಯಾದಿ ಉತ್ಪನ್ನಗಳನ್ನು ಜಂಗಲ್ ಬೌಂಡ್ ತಯಾರಿಸುತ್ತದೆ.
Pic credit: Insta
ಮರ, ಬಿದಿರಿನಿಂದ ಮಾಡುವ ಈ ಉತ್ಪನ್ನಗಳಿಗೆ ಹೊಸದಾಗಿ ಮರ ಕಡಿಯುವುದಿಲ್ಲ. ಹಳೆಯ ಮರಗಳನ್ನು ಪಡೆದು ಅದರಿಂದ ಈ ಎಲ್ಲಾ ಪ್ರಾಡಕ್ಟ್ಸ್ ತಯಾರಿಸುತ್ತದೆ ಪ್ರತೀಕ್ಷಾ ಅವರ ಕಂಪನಿ.
Pic credit: Insta
ಮೂರು ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಈಗ ವರ್ಷಕ್ಕೆ 50 ಲಕ್ಷ ರೂ ಟರ್ನೋವರ್ ಪಡೆಯುವ ಮಟ್ಟಕ್ಕೆ ಬೆಳೆದಿದೆ. ಪರಿಸರಸ್ನೇಹ ಮತ್ತು ಬಿಸಿನೆಸ್ ಎರಡೂ ಬೆರೆತರೆ ಅದು ಜಂಗಲ್ ಬೌಂಡ್...
Pic credit: Insta
ಮನಸಿಗೆ ಇಷ್ಟವಾಗುವ ವಿಚಾರದಲ್ಲೇ ಬದುಕು ಕಟ್ಟಿಕೊಂಡು ಯಶಸ್ವಿಯಾಗಬಹುದು ಎಂಬುದನ್ನು ಪುಣೆಯ ಹುಡುಗಿ ಪ್ರತೀಕ್ಷಾ ಶೆಲ್ಕೆ ತೋರಿಸಿಕೊಟ್ಟಿದ್ದಾರೆ. ಯುವ ಉದ್ದಿಮೆದಾರರಿಗೆ ಈಕೆ ಒಂದು ಮಾದರಿ.