ಆರ್ಬಿಐ ಎರಡು ತಿಂಗಳಿಗೊಮ್ಮೆ ನಡೆಸುವ ಎಂಪಿಸಿ ಸಭೆ ಮುಗಿದಿದ್ದು, ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡರು.
Pic credit: Getty
ಸುದ್ದಿಗೋಷ್ಠಿ
ಬಡ್ಡಿದರ ಅಥವಾ ರೆಪೋ ದರದಲ್ಲಿ ಬದಲಾವಣೆ ಮಾಡಲಿಲ್ಲ. ಜಿಡಿಪಿ, ಹಣದುಬ್ಬರದ ಬಗ್ಗೆ ಮಾತನಾಡಿದರು. ಅದು ಬಿಟ್ಟು ಇನ್ನೂ ಕೆಲ ಮಹತ್ವದ ನಿರ್ಧಾರಗಳನ್ನು ದಾಸ್ ಬಹಿರಂಗಪಡಿಸಿದರು.
Pic credit: Getty
ಬಡ್ಡಿದರ ಯಥಾಸ್ಥಿತಿ
ನಿಮ್ಮ ಬ್ಯಾಂಕ್ ಖಾತೆಯನ್ನು ಯುಪಿಐ ಮೂಲಕ ಬಳಸಲು ಇನ್ನೊಬ್ಬರಿಗೆ ನೀವು ಅಧಿಕಾರ ನೀಡಬಲ್ಲಂತಹ ಡೆಲಿಗೇಟೆಡ್ ಪೇಮೆಂಟ್ಸ್ ಫೀಚರ್ ಅನ್ನು ಆರ್ಬಿಐ ಪ್ರಕಟಿಸಿದೆ.
Pic credit: Getty
1. ನಿಯೋಜಿತ ಪಾವತಿ
ಸದ್ಯ ಚೆಕ್ಗಳು ಕ್ಲಿಯರ್ ಆಗಲು ಎರಡು ದಿನ ಆಗುತ್ತಿದೆ. ಸಿಟಿಎಸ್ ಸಿಸ್ಟಂನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲಾಗುತ್ತಿದ್ದು, ಇದು ಜಾರಿಯಾದರೆ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲಿಯರ್ ಆಗುತ್ತದೆ.
Pic credit: Getty
2. ಚೆಕ್ ಸಲೀಸು
ಅನಧಿಕೃತ ಲೋನ್ ಆ್ಯಪ್ಗಳಿಗೆ ಕಡಿವಾಣ ಹಾಕಲು ಆರ್ಬಿಐ ಒಂದು ಪಬ್ಲಿಕ್ ರೆಪೋಸಿಟರಿ ರಚಿಸಲಿದೆ. ಆರ್ಬಿಐ ಸ್ವಾಧೀನದ ಸಂಸ್ಥೆಗಳ ಆ್ಯಪ್ಗಳು ಈ ಪಟ್ಟಿಯಲ್ಲಿ ಇರಲಿವೆ. ಇದು ಸಾರ್ವಜನಿಕರಿಗೆ ವೀಕ್ಷಣೆಗೆ ಸಿಗುತ್ತದೆ.
Pic credit: Getty
3. ಅಧಿಕೃತ ಪಟ್ಟಿ
ಯುಪಿಐ ಮೂಲಕ ತೆರಿಗೆ ಪಾವತಿಸುವ ಕಾರ್ಯವನ್ನು ಆರ್ಬಿಐ ಸುಗಮಗೊಳಿಸಿದೆ. ಸದ್ಯಕ್ಕೆ ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿ 1 ಲಕ್ಷ ರೂ ಇದೆ. ಇದನ್ನು 5 ಲಕ್ಷ ರೂಗೆ ಹೆಚ್ಚಿಸಲಾಗುತ್ತಿದೆ.
Pic credit: Getty
4. ಟ್ಯಾಕ್ಸ್ ಪೇಮೆಂಟ್
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 2024-25ರಲ್ಲಿ ಹಣದುಬ್ಬರ ಶೇ. 4.5, ಜಿಡಿಪಿ ದರ ಶೇ. 7.2 ಇರಬಹುದು ಎಂಬುದು ಅವರ ಅಂದಾಜು.