ವೀಸಾ ಅರ್ಜಿ ತಿರಸ್ಕೃತಗೊಳ್ಳಲು ಪ್ರಮುಖ ಕಾರಣಗಳಿವು

07 July 2024

Pic credit: Google

Vijayasarathy SN

ಯಾವುದೇ ದೇಶಕ್ಕೆ ಹೋಗಬೇಕಾದರೆ ಆ ದೇಶದ ರಾಯಭಾರ ಕಚೇರಿಯಲ್ಲಿ ವೀಸಾಗೆ ಅರ್ಜಿ ಸಲ್ಲಿಸಬೇಕು. ಕೆಲವೊಮ್ಮೆ ವೀಸಾ ಅರ್ಜಿ ತಿರಸ್ಕೃತಗೊಳ್ಳುವುದುಂಟು. ಅದಕ್ಕೇನು ಕಾರಣ ತಿಳಿಯಿರಿ...

ಕಾರಣ ತಿಳಿಯಿರಿ

Pic credit: Google

ಅರ್ಜಿಯಲ್ಲಿ ಸರಿಯಾದ ಮಾಹಿತಿ ಹಾಕದೇ ಇದ್ದರೆ, ಅಥವಾ ಯಾವುದಾದರೂ ಅಗತ್ಯ ದಾಖಲಾತಿ ಲಗತ್ತಿಸಿಲ್ಲದೇ ಇದ್ದರೆ ವೀಸಾ ಅರ್ಜಿ ತಿರಸ್ಕೃತಗೊಳ್ಳಬಹುದು.

1. ಮಾಹಿತಿ ದೋಷ

Pic credit: Google

ನೀವು ಹೋಗುವ ದೇಶದಲ್ಲಿ ನಿಮಗೆ ಇರಲು ಸಾಕಷ್ಟು ಹಣಕಾಸು ಬಲ ಇಲ್ಲ ಎಂದನಿಸಿದರೆ ಅಧಿಕಾರಿಗಳು ನಿಮ್ಮ ವೀಸಾ ಅರ್ಜಿ ತಿರಸ್ಕರಿಸಬಹುದು.

2. ಹಣಕಾಸು ಬಲ

Pic credit: Google

ಕೆಲ ದೇಶಗಳ ವೀಸಾಗಳಿಗೆ ಟ್ರಾವಲ್ ಇನ್ಷೂರೆನ್ಸ್ ಕಡ್ಡಾಯ ಇರುತ್ತದೆ. ನಿಮ್ಮಲ್ಲಿ ಅಗತ್ಯ ಇನ್ಷೂರೆನ್ಸ್ ಕವರೇಜ್ ಇಲ್ಲದಿದ್ದರೆ ವೀಸಾ ಅರ್ಜಿ ತಿರಸ್ಕೃತಗೊಳ್ಳಬಹುದು.

3. ಟ್ರಾವಲ್ ಇನ್ಷೂರೆನ್ಸ್

Pic credit: Google

ವೀಸಾ ಅವಧಿ ಇಂತಿಷ್ಟು ಎಂದಿರುತ್ತದೆ. ನೀವು ಹಿಂದೆ ಎಂದಾದರೂ ವೀಸಾ ಅವಧಿ ಮೀರಿ ಉಳಿದುಕೊಂಡಿದ್ದರೆ, ಅಥವಾ ವೀಸಾ ನಿಯಮ ಉಲ್ಲಂಘಿಸಿದರೆ ಅರ್ಜಿ ತಿರಸ್ಕರಿಸಬಹುದು.

4. ನಿಯಮ ಉಲ್ಲಂಘನೆ

Pic credit: Google

ಕ್ರಿಮಿನಲ್ ಕೇಸ್ ದಾಖಲಾಗಿದ್ದರೆ ವೀಸಾ ಪಡೆಯುವುದು ಕಷ್ಟವಾಗಬಹುದು. ಆದರೆ, ವೀಸಾ ಪಡೆಯಲು ಅನರ್ಹ ಎನಿಸುವ ಅಪರಾಧ ಯಾವುದು ಎಂಬುದು ಬೇರೆ ಬೇರೆ ದೇಶದಲ್ಲಿ ಬೇರೆ ನಿಯಮಗಳಿವೆ.

5. ಕ್ರಿಮಿನಲ್ ಕೇಸ್

Pic credit: Google

ವೀಸಾ ಅರ್ಜಿ ತಿರಸ್ಕೃತಗೊಂಡಲ್ಲಿ ಸ್ವಲ್ಪ ಹಣದ ರೀಫಂಡ್ ಪಡೆಯಲು ಅವಕಾಶ ಇರುತ್ತದೆ. ರಾಯಭಾರ ಕಚೇರಿಯಲ್ಲಿ ನೇರವಾಗಿ ಹೋಗಿಯೋ ಅಥವಾ ವೆಬ್​ಸೈಟ್ ಮೂಲಕವೋ ನೀವು ರೀಫಂಡ್​ಗೆ ಅರ್ಜಿ ಹಾಕಬಹುದು.

ರೀಫಂಡ್ ಪಡೆಯಿರಿ

Pic credit: Google