ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಆಪರೇಷನ್ ಯಶಸ್ವಿ
24 November 2023
ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದಗೆಡಿಸಿರುವ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಏನೇ ಕಸರತ್ತು ನಡೆಸಿದರು ಪ್ರಯೋಜನವಾಗಿರಲಿಲ್ಲ.
ಕಾಡಾನೆ ಹಾವಳಿ
ಜನರ ಜೀವ ಹಾನಿ ತಡೆಯುವ ನಿಟ್ಟಿನಲ್ಲಿ ಕಾಡಾನೆಗಳ ಚಲನವಲನ ಅರಿಯಲು ಅರಣ್ಯ ಇಲಾಕೆ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ಮುಂದಾಗಿದೆ.
ರೇಡಿಯೋ ಕಾಲರ್
ಇಂದಿನಿಂದ 21 ದಿನ ಜಿಲ್ಲೆಯಲ್ಲಿ ಸಾಕಾನೆಗಳ ನೆರವಿನೊಂದಿಗೆ ಕಾಡಾನೆಗಳ ಸೆರೆ, ಸ್ತಳಾಂತರ,
ರೇಡಿಯೋ ಕಾಲರಿಂಗ್ ಆಪರೇಷನ್ ಶುರುವಾಗಿದೆ.
21 ದಿನ
ಸುಮಾರು 80ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
80ಕ್ಕೂ ಹೆಚ್ಚು ಸಿಬ್ಬಂದಿ
ಕಾರ್ಯಚರಣೆಗೆ ದುಬಾರೆಯಿಂದ ಪ್ರಶಾಂತ್, ಸುಗ್ರಿವಾ, ಧನಂಜಯ, ನಾಗರಹೊಳೆಯಿಂದ ಅರ್ಜುನ, ಭೀಮ ಮತ್ತು ಅಶ್ವತ್ಥಾಮ ಆನೆಗಳು ಆಗಮಿಸಿವೆ
ಕಾರ್ಯಚರಣೆಗೆ ಆನೆಗಳು
ಮೊದಲ ದಿನವೇ 40 ಆನೆಗಳ ಹಿಂಡಿನ ನಾಯಕಿ ಬೀಟಮ್ಮಗೆ ಯಶಸ್ವಿಯಾಗಿ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
40 ಆನೆಗಳ ಹಿಂಡು
ಈ ಭಾಗದಲ್ಲಿ ನೆಲೆಸಿರುವ ಎಲ್ಲಾ ಕಾಡಾನೆಗಳನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಜನರು ಬಹುದಿನಗಳಿಂದ ಆಗ್ರಹಿಸುತ್ತಿದ್ದರು.
ಜನರ ಆಗ್ರಹ
ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿರುವ ಗಜಪಡೆ ಅಪಾರ ಪ್ರಮಾಣದ ಕಾಫಿ, ಬಾಳೆ, ಏಲಕ್ಕಿ, ಅಡಿಕೆ ಬೆಳೆಗಳನ್ನ ನಾಶ ಮಾಡುತ್ತಿವೆ.
ಬೆಳೆ ನಾಶ
NEXT: ಡಿಕೆ ಶಿವಕುಮಾರ್
ವಿರುದ್ಧದ ಸಿಬಿಐ ತನಿಖೆ ವಾಪಸ್: ಪ್ರಕರಣ ಹಿನ್ನೋಟ