ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್: ಪ್ರಕರಣ ಹಿನ್ನೋಟ
23 November 2023
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ
ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋಸಿದೆ.
ರಾಜ್ಯ ಸಚಿವ ಸಂಪುಟ
2013-2018ರ ಅವಧಿಯಲ್ಲಿ ಗಳಿಸಿದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ಕೇಸ್ ದಾಖಲಿಸಿತ್ತು.
ಸಿಬಿಐ ಕೇಸ್
74.93 ಕೋಟಿ ರೂ. ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧ ಸಿಬಿಐ FIR ದಾಖಲಿಸಿದ್ದು, ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ.
ಸರ್ಕಾರದ ಸಮ್ಮತಿ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
FIR
ಹೈಕೋರ್ಟ್ ಏಕಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿತ್ತು. ಬಳಿಕ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು,
ವಿಭಾಗೀಯ ಪೀಠ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ನೀಡಿದ ಕ್ರಮಕ್ಕೆ ಹೈಕೋರ್ಟ್ ವಿಭಾಗೀಯ ಪೀಠ
ತಡೆಯಾಜ್ಞೆ ನೀಡಿತ್ತು. ಸದ್ಯ ಹೈಕೋರ್ಟ್ ವಿಚಾರಣೆಯನ್ನು ನ.29 ಕ್ಕೆ ಮುಂದೂಡಿದೆ.
ನ.29 ವಿಚಾರಣೆ ಮುಂದೂಡಿಕೆ
ಸಿಬಿಐ 84 ಸಾಕ್ಷಿಗಳು, ಡಿಕೆಶಿ ಸಲ್ಲಿಸಿರುವ 2412 ಪುಟಗಳಷ್ಟು ದಾಖಲೆಗಳು, ಡಿಕೆ ಶಿವಕುಮಾರ್, ಕುಟುಂಬದವರ 98 ಬ್ಯಾಂಕ್ ಖಾತೆಯನ್ನು
ಲೆಕ್ಕಪರಿಶೋಧಕರ ನೆರವಿನೊಂದಿಗೆ ಪರಿಶೀಲಿಸಲಾಗಿದೆ.
ದಾಖಲೆ ಪರಿಶೀಲನೆ
ಡಿಕೆ ಶಿವಕುಮಾರ್ ಕೆಲ ಆಸ್ತಿಗಳನ್ನು ಚುನಾವಣಾ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ.
ಆಸ್ತಿ ಉಲ್ಲೇಖಿಸಿಲ್ಲ
7.80 ಕೋಟಿಯ ಗ್ಲೋಬಲ್ ಮಾಲ್, ಕನಕಪುರ ನಗರದಲ್ಲಿನ ಆಸ್ತಿ, ಬೆನ್ನಿ ಸ್ಟೋನ್ ಗಾರ್ಡನ್, ಸದಾಶಿವನಗರದ ಮನೆ,
ಪತ್ನಿಯ ಹೆಸರಿನಲ್ಲಿ 17.33 ಕೋಟಿ ರೂ. ಸ್ಥಿರಾಸ್ತಿ, 2.77 ಕೋಟಿ ರೂ. ಚರಾಸ್ತಿ, 2018ರವರೆಗೆ 43.12 ಕೋಟಿ ರೂ. ಆಸ್ತಿ, 3.2 ಕೋಟಿ ರೂ. 10 ಚರಾಸ್ತಿ ಪತ್ತೆಯಾಗಿದೆ.
ಆಸ್ತಿ ವಿವರ
ಅವಲಂಬಿತ ಮಕ್ಕಳ ಹೆಸರಿನಲ್ಲಿ 61.75 ಕೋಟಿ ರೂ. 25.90 ಕೋಟಿ ರೂ. ಸ್ಥಿರಾಸ್ತಿ ಮಾಹಿತಿ ಇರುವುದಾಗಿ ಸಿಬಿಐ ಪರ ವಕೀಲರು ಕೋರ್ಟ್ಗೆ
ಮಾಹಿತಿ ನೀಡಿದ್ದಾರೆ.