ನಿಮ್ಮ ಆಹಾರದಲ್ಲಿ ಇರಲೇಬೇಕಾದ ಸೊಪ್ಪುಗಳಿವು

06 Dec 2023

Author: Sushma Chakre

ಸೊಪ್ಪುಗಳು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ 7 ಆರೋಗ್ಯಕರ ಹಸಿರು ಸೊಪ್ಪುಗಳು ಇಲ್ಲಿವೆ.

ಆರೋಗ್ಯಕ್ಕೆ ಅತ್ಯಗತ್ಯವಾದ 7 ಸೊಪ್ಪು

ಕೊತ್ತಂಬರಿ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಹೇರಳವಾಗಿವೆ. ಅವು ಚಟ್ನಿ, ಸಲಾಡ್‌ಗಳನ್ನು ಒಳಗೊಂಡಂತೆ ವಿವಿಧ ಭಾರತೀಯ ಭಕ್ಷ್ಯಗಳಿಗೆ ತಾಜಾತನವನ್ನು ನೀಡುತ್ತವೆ.

ಕೊತ್ತಂಬರಿ ಸೊಪ್ಪು

ಹರಿವೆ ಸೊಪ್ಪು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಪಲ್ಯ, ಸಾಸಿವೆ, ಸಾಂಬಾರ್​ ರೂಪದಲ್ಲಿ ಹರಿವೆ ಸೊಪ್ಪನ್ನು ಸೇವಿಸಬಹುದು.

ಹರಿವೆ ಸೊಪ್ಪು

ಪೌಷ್ಟಿಕಾಂಶದ ಶಕ್ತಿಕೇಂದ್ರವಾದ ನುಗ್ಗೆ ಸೊಪ್ಪು ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಸಾಂಪ್ರದಾಯಿಕ ಪಾಕವಿಧಾನಗಳಾದ ಸಾಂಬಾರ್ ಮತ್ತು ಕರಿಗಳಲ್ಲಿ ಇದನ್ನು ಬಳಸಬಹುದು.

ನುಗ್ಗೆ ಸೊಪ್ಪು

ಕಬ್ಬಿಣ, ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವ ಮೆಂತ್ಯ ಸೊಪ್ಪುಗಳನ್ನು ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಅವುಗಳನ್ನು ಅಡುಗೆಗೆ, ದಾಲ್‌ಗಳಿಗೆ ಸೇರಿಸಬಹುದು ಅಥವಾ ಪರಾಠಾಗಳಿಗೆ ಸೇರಿಸಬಹುದು.

ಮೆಂತ್ಯ ಸೊಪ್ಪು

ಪಾಲಕ್ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಮತ್ತು ಕೆ ಯಿಂದ ತುಂಬಿದ ಬಹುಮುಖ ಸೊಪ್ಪು. ಇದನ್ನು ಗ್ರೇವಿ, ಬಿರಿಯಾನಿ, ಪಲಾವ್ ಸೇರಿದಂತೆ ಭಾರತೀಯ ಅಡುಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಪಾಲಕ್ ಸೊಪ್ಪು

ಕುಂಬಳಕಾಯಿ ಎಲೆಗಳು ಪೌಷ್ಟಿಕವಾಗಿರುತ್ತದೆ. ಇದನ್ನು ಸಬ್ಜಿ ತಯಾರಿಸಲು ಬಳಸಬಹುದು ಅಥವಾ ದಾಲ್ ತಯಾರಿಕೆಯಲ್ಲಿ ಸೇರಿಸಬಹುದು. ಇದರಲ್ಲಿ ಜೀವಸತ್ವಗಳು ಸಮೃದ್ಧವಾಗಿವೆ ಮತ್ತು ಭಕ್ಷ್ಯಗಳಿಗೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತವೆ.

ಕುಂಬಳಕಾಯಿ ಎಲೆಗಳು

ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ, ತುಳಸಿ ಎಲೆಗಳು ತಮ್ಮ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಅವುಗಳ ಆರೋಗ್ಯ ಪ್ರಯೋಜನಗಳಿಗಾಗಿ ಅವುಗಳನ್ನು ಚಹಾ, ಸಲಾಡ್‌ಗಳಿಗೆ ಸೇರಿಸಬಹುದು ಅಥವಾ ಹಸಿಯಾಗಿಯೇ ಸೇವಿಸಬಹುದು.

ತುಳಸಿ ಎಲೆಗಳು