26 February 2025

Pic credit -  Pintrest

Preethi Bhat

ಮೈಗ್ರೇನ್ ಕಡಿಮೆ ಮಾಡಿಕೊಳ್ಳಲು ಈ ಬೀಜಗಳ ಸೇವನೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಹಣ್ಣು, ತರಕಾರಿಗಳ ಜೊತೆಗೆ ಸಾಧ್ಯವಾದಷ್ಟು ಬೀಜಗಳ ಸೇವನೆ ಮಾಡುವುದು ಬಹಳ ಒಳ್ಳೆಯದು.

Pic credit -  Pintrest

ಸೂರ್ಯಕಾಂತಿ ಬೀಜಗಳು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪ್ರಮುಖ ಪೋಷಕಾಂಶಗಳ ಗಣಿಯಾಗಿದೆ.

Pic credit -  Pintrest

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಬಿ 6, ಇ, ಮೆಗ್ನೀಸಿಯಮ್, ತಾಮ್ರ ಮುಂತಾದ ಅನೇಕ ಪೋಷಕಾಂಶಗಳಿದ್ದು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

Pic credit -  Pintrest

ಈ ಬೀಜಗಳಲ್ಲಿನ ವಿಟಮಿನ್ ಇ ಮತ್ತು ಸಿ  ಹೃದ್ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ಪ್ರಬಲ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

Pic credit -  Pintrest

ಸೂರ್ಯಕಾಂತಿ ಬೀಜಗಳಲ್ಲಿ ಮೊನೊ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ.

Pic credit -  Pintrest

ಸೂರ್ಯಕಾಂತಿ ಬೀಜಗಳು ಒತ್ತಡ ಮತ್ತು ಮೈಗ್ರೇನ್ ನಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತವೆ. ಇದು ಮೆದುಳನ್ನು ಶಾಂತಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ.

Pic credit -  Pintrest

ಅಧಿಕ ರಕ್ತದೊತ್ತಡ ಹೊಂದಿರುವವರು ಸೂರ್ಯಕಾಂತಿ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

Pic credit -  Pintrest

ದೇಹದಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ