ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಮನೆಮದ್ದು
ಬಾಯಿಯ ದುರ್ವಾಸನೆಯನ್ನು ವೈದ್ಯಕೀಯವಾಗಿ ಹ್ಯಾಲಿಟೋಸಿಸ್ ಎಂದು ಕರೆಯುತ್ತಾರೆ. ಇದು ಬಾಯಿಯಿಂದ ಹೊರಬರುವ ಅಹಿತಕರ ಉಸಿರು ಅಥವಾ ವಾಸನೆಯಾಗಿದೆ.
Pic credit - Pintrest
ಬಾಯಿಯಿಂದ ಹೊರಬರುವ ದುರ್ವಾಸನೆ ನಿಮ್ಮ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತದೆ. ನಾಲ್ಕು ಜನರೆದುರು ಮಾತನಾಡಲೂ ಸಹ ಹಿಂಜರಿಕೆಯನ್ನುಂಟು ಮಾಡುತ್ತದೆ.
Pic credit - Pintrest
ಈ ಸಮಸ್ಯೆಗೆ ಪರಿಣಾಮಕಾರಿಯಾಗಿ ಮನೆಮದ್ದುಗಳನ್ನು ಟ್ರೈ ಮಾಡಬಹುದು. ಬೆಚ್ಚಗಿನ ನೀರಿಗೆ ಒಂದು ಟೀ ಸ್ಪೂನ್ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಿಂದ ಬರುವ ವಾಸನೆ ಕಡಿಮೆಯಾಗುತ್ತೆ.
Pic credit - Pintrest
ಹೈಡ್ರೋಜನ್ ಪೆರಾಕ್ಸೈಡ್ ಮತ್ತು ನೀರನ್ನು ಒಂದೇ ಅಳತೆಯಲ್ಲಿ ಸೇರಿಸಿ ಅದನ್ನು 30 ಸೆಕೆಂಡುಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Pic credit - Pintrest
ಬಾಯಿಯ ದುರ್ವಾಸನೆ ತಡೆಯಲು ತಾಜಾ ಪುದೀನಾ ಎಲೆಗಳನ್ನು ಅಗಿಯಿರಿ. ದಿನಬಿಟ್ಟು ದಿನ ಈ ಎಲೆಗಳನ್ನು ಸೇವನೆ ಮಾಡಿ.
Pic credit - Pintrest
ಲವಂಗದ ಎಣ್ಣೆಯನ್ನು ನೀರಿಗೆ ಬೆರೆಸಿ ಉಗುಳುವ ಮೊದಲು ಬಾಯಿಯ ಸುತ್ತಲೂ ತಿರುಗಿಸಿ, ಚೆನ್ನಾಗಿ ಮುಕ್ಕಳಿಸಿರಿ. ಇದರಿಂದ ಕೆಟ್ಟ ಉಸಿರಾಟದಿಂದ ಮುಕ್ತಿ ಪಡೆಯಬಹುದು.
Pic credit - Pintrest
ಈರುಳ್ಳಿ, ಮೀನು, ಬೆಳ್ಳುಳ್ಳಿಯಂತಹ ಕಠುವಾದ ಪರಿಮಳವಿರುವ ಆಹಾರವನ್ನು ಪ್ರತಿನಿತ್ಯ ತಿನ್ನುವುದನ್ನು ತಪ್ಪಿಸಿ.