3 March 2025

Pic credit -  Pintrest

Preethi Bhat

ಹಕ್ಕಿ ಜ್ವರ: ನಾನ್​ವೆಜ್ ತಿನ್ನೋರು ವಹಿಸಬೇಕಾದ ಮುನ್ನೆಚ್ಚರಿಕೆ ಏನು?

ಹಕ್ಕಿಜ್ವರ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಗಳಲ್ಲಿ ಈ ಬಗ್ಗೆ ಕಟ್ಟೆಚ್ಚರವಹಿಸಲಾಗುತ್ತಿದೆ. ಹಾಗಾಗಿ ನಾನ್​ವೆಜ್ ಸೇವನೆ ಮಾಡುವವರು ಬಹಳ ಜಾಗೃತಿ ವಹಿಸುವುದು ಅನಿವಾರ್ಯವಾಗಿದೆ.

Pic credit -  Pintrest

ಸಾಮಾನ್ಯವಾಗಿ ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಸೋಂಕಿತ ಹಕ್ಕಿಯನ್ನು ಕೊಲ್ಲುವುದು ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡುತ್ತದೆ.

Pic credit -  Pintrest

ಈ ಸಮಯದಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಕೈಗಳನ್ನು ನಿರಂತರವಾಗಿ ತೊಳೆಯುತ್ತಿರಿ. ಬಿಸಿ ನೀರು ಮತ್ತು ಸೋಪು ಬಳಸಿ.

Pic credit -  Pintrest

ಕೋಳಿ ಅಥವಾ ಕೋಳಿ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿಂದರೆ ಅದರಿಂದ ಯಾವುದೇ ಸೋಂಕು ಹಬ್ಬುವ ಸಾಧ್ಯತೆಯು ಇರುವುದಿಲ್ಲ.

Pic credit -  Pintrest

ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಸ್ಯಾನಿಟೈಸರ್ ನ್ನು ಬಳಸಿ.

Pic credit -  Pintrest

ತೆರೆದ ಮಾರುಕಟ್ಟೆಯಿಂದ ದೂರವಿರಿ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿಯನ್ನು ತಿನ್ನಬೇಡಿ. ಹಸಿ ಮೊಟ್ಟೆ ಸೇವಿಸಬೇಡಿ.

Pic credit -  Pintrest

ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲವಾದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ವೈದ್ಯರಿಂದ ತಿಳಿದುಕೊಂಡು ಸುರಕ್ಷಿತವಾಗಿರಿ.

Pic credit -  Pintrest

ಗರ್ಭಿಣಿಯರು ಎಳನೀರನ್ನು ಕುಡಿಯಬಹುದೇ? ಇಲ್ಲಿದೆ ತಜ್ಞರ ಉತ್ತರ