04-12-2023

ಚೀನಾ ನಿಗೂಢ ವೈರಸ್: ಬೆಂಗಳೂರಿನಲ್ಲೂ ಭೀತಿ

Author: ಗಣಪತಿ ಶರ್ಮ

ಚೀನಾದಲ್ಲಿ ನ್ಯುಮೋನಿಯಾ ರೀತಿಯ ಆರೋಗ್ಯ ಸಮಸ್ಯೆ ಹೆಚ್ಚಾಗಿರುವುದು ಭಾರತದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.

ಇದೀಗ ಬೆಂಗಳೂರಿನಲ್ಲಿಯೂ ಉಸಿರಾಟ ಸಂಬಂಧಿ ಅನಾರೋಗ್ಯ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದು, ಭೀತಿ ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ನ್ಯುಮೋನಿಯಾ ಪ್ರಕರಣಗಳಲ್ಲಿ ಶೇ 20 ರಷ್ಟು ಹೆಚ್ಚಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ನ್ಯುಮೋನಿಯಾ ಪ್ರಕರಣಗಳು ದಾಖಲಾಗುತ್ತಿವೆ.

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗಿದೆ.

ಚೀನಾದ ಹೊಸ ನಿಗೂಢ ವೈರಸ್ ಗೂ ಬೆಂಗಳೂರಿನಲ್ಲಿ ನ್ಯುಮೋನಿಯಾ ಪ್ರಕರಣ ಹೆಚ್ಚಾಗಿರುವುದಕ್ಕೂ ಸಂಬಂಧ ಇದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿ ದಿನ 5 ರಿಂದ 6 ಹೊಸ ನ್ಯುಮೋನಿಯಾ ಪ್ರಕರಣಗಳು ಪತ್ತೆಯಾಗುತ್ತಿವೆ.