18 JULY 2024
Pic credit -pinterest
ಗರ್ಭಿಣಿಯರ ಪಾದ ಊದಿಕೊಂಡಾಗ ಹೀಗೆ ಮಾಡಿ
preeti bhatt
ಗರ್ಭಾವಸ್ಥೆ ಎನ್ನುವುದು ಎಷ್ಟು ಖುಷಿ ನೀಡುತ್ತದೆಯೋ, ಅಷ್ಟೇ ಸವಾಲುಗಳನ್ನು ಹೊಂದಿರುತ್ತದೆ. ಹಾಗಾಗಿ ಅದೆಲ್ಲದಕ್ಕೂ ಗರ್ಭಿಣಿಯರು ಸಿದ್ಧರಿರಬೇಕಾಗುತ್ತದೆ.
Pic credit - pinterest
ಗರ್ಭಾವಸ್ಥೆಯ ಸಮಯದಲ್ಲಿ ಕಾಲು ಅಥವಾ ಪಾದದಲ್ಲಿ ಊತ ಕಂಡು ಬರುವುದು ಸಾಮಾನ್ಯ.
Pic credit - pinterest
ಗರ್ಭಿಣಿಯರಿಗೆ ಈ ಸಮಯದಲ್ಲಿ, ದೇಹದ ಒತ್ತಡದಿಂದ ಪಾದ, ಕಾಲುಗಳಲ್ಲಿ ಊತ ಕಂಡು ಬರುತ್ತದೆ.
Pic credit - pinterest
ದೇಹ ನಿರ್ಜಲೀಕರಣಗೊಂಡಾಗ ಕಾಲುಗಳು ಊದಿಕೊಳ್ಳಬಹುದು ಹಾಗಾಗಿ ಹೆಚ್ಚು ಹೆಚ್ಚು ನೀರು ಕುಡಿಯಿರಿ.
Pic credit - pinterest
ಕೆಫಿನ್ ಅಂಶವಿರುವ ಆಹಾರ ಮತ್ತು ಉಪ್ಪನ್ನು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಸೇವನೆ ಮಾಡುವುದು ಒಳ್ಳೆಯದಲ್ಲ.
Pic credit - pinterest
ರಾತ್ರಿ ಮಲಗುವಾಗ ಪಾದದ ಕೆಳಗೆ ದಿಂಬುಗಳನ್ನು ಇಟ್ಟು ಅದರ ಮೇಲೆ ಪಾದಗಳನ್ನು ಇಟ್ಟು ಮಲಗುವುದು ತುಂಬಾ ಉತ್ತಮ.
Pic credit - pinterest
ರಾತ್ರಿ ಅಥವಾ ಬಿಡುವಿನ ಸಮಯದಲ್ಲಿ ಪಾದಗಳಿಗೆ ಎಣ್ಣೆ ಮಸಾಜ್, ಸ್ವಲ್ಪ ನಡಿಗೆ, ಸ್ವಲ್ಪ ವ್ಯಾಯಾಮವೂ ಕೂಡ ಈ ಸಮಸ್ಯೆಗೆ ಉತ್ತಮ ಫಲಿತಾಂಶ ನೀಡುತ್ತದೆ.
Pic credit - pinterest
ಇದು ಬಣ್ಣ ಬಣ್ಣದ ಚಿಟ್ಟೆಗಳದ್ದೇ ಲೋಕ