Author: Sushma Chakre

ನುಗ್ಗೆಕಾಯಿ ಸೇವನೆಯಿಂದಾಗುವ 5 ಪ್ರಯೋಜನಗಳಿವು

19 Dec 2023

Author: Sushma Chakre

ನುಗ್ಗೆಕಾಯಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಹಾಲಿಗಿಂತಲೂ 2 ಪಟ್ಟು ಹೆಚ್ಚು ಪ್ರೋಟೀನ್ ಮತ್ತು 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ಬೀಜಗಳು ಎಲ್ಲವೂ ಬಹಳ ಉಪಯುಕ್ತವಾಗಿವೆ.

ಕ್ಯಾಲ್ಸಿಯಂನ ಮೂಲ

ಹೊಟ್ಟೆ ಮತ್ತು ಕೆಮ್ಮಿನ ರೋಗಗಳಿಗೆ ನುಗ್ಗೆಕಾಯಿ ಬಹಳ ಪ್ರಯೋಜನಕಾರಿ. ನುಗ್ಗೆ ಸೊಪ್ಪು ಉಳುಕು, ಸಿಯಾಟಿಕಾ, ಕಣ್ಣಿನ ಕಾಯಿಲೆ ಮತ್ತು ಸಂಧಿವಾತಕ್ಕೆ ಪ್ರಯೋಜನಕಾರಿಯಾಗಿದೆ. ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ನುಗ್ಗೆ ಕಾಯಿ ವಿವಿಧ ರೋಗಗಳನ್ನು ಗುಣಪಡಿಸುತ್ತದೆ.

ಕೆಮ್ಮಿಗೆ ಔಷಧಿ

ನುಗ್ಗೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್-ಎ, ವಿಟಮಿನ್-ಬಿ1, ವಿಟಮಿನ್-ಬಿ2, ವಿಟಮಿನ್-ಬಿ3, ವಿಟಮಿನ್-ಬಿ5, ವಿಟಮಿನ್-ಬಿ6, ವಿಟಮಿನ್-ಬಿ9, ವಿಟಮಿನ್-ಸಿ, ಪೊಟ್ಯಾಸಿಯಮ್, ಕಬ್ಬಿಣ, ನೀರು, ಡಯೆಟರಿ ಫೈಬರ್, ಪ್ರೊಟೀನ್ ಇದೆ. ಸೋಡಿಯಂ, ಕಾರ್ಬೋಹೈಡ್ರೇಟ್, ರಂಜಕ ಮತ್ತು ಸತುವು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.

ಪೋಷಕಾಂಶಗಳ ಪವರ್‌ಹೌಸ್

ಡಯಾಬಿಟಿಸ್ ರೋಗಿಗಳಿಗೆ ನುಗ್ಗೆಕಾಯಿ ಸೇವನೆಯು ತುಂಬ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ. ಇದಲ್ಲದೆ, ನುಗ್ಗೆಕಾಯಿ ಪಿತ್ತಕೋಶದ ಕಾರ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ರೋಗಿಗಳಿಗೆ ನುಗ್ಗೆಕಾಯಿ ರಾಮಬಾಣವಾಗಿದೆ.

ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ

ರಕ್ತವನ್ನು ಶುದ್ಧೀಕರಿಸುವಲ್ಲಿ ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ. ಇದರ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು ಶಕ್ತಿಯುತವಾದ ಪ್ರತಿರಕ್ಷಣಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ನುಗ್ಗೆಕಾಯಿ ಜ್ಯೂಸ್ ಮತ್ತು ಸೂಪ್ ತುಂಬಾ ಶಕ್ತಿಶಾಲಿ. ಚರ್ಮಕ್ಕೆ ಸಂಬಂಧಿಸಿದ ಅನೇಕ ರೋಗಗಳ ನಿವಾರಣೆಗೆ ಇದು ಪ್ರಯೋಜನಕಾರಿಯಾಗಿದೆ. 

ರಕ್ತವನ್ನು ಶುದ್ಧೀಕರಿಸುತ್ತದೆ

ನುಗ್ಗೆಕಾಯಿಯಲ್ಲಿರುವ ಫೈಬರ್ ಅಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಕರುಳನ್ನು ಸ್ವಚ್ಛಗೊಳಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳ ಸಮೃದ್ಧಿಯಿಂದಾಗಿ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಪ್ರಯೋಜನಕಾರಿಯಾಗಿದೆ.

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ