Author: Sushma Chakre

ಕಣ್ಣಿನ ಉತ್ತಮ ಆರೋಗ್ಯಕ್ಕೆ ಈ ಆಹಾರ ಸೇವಿಸಿ

01 ಜನವರಿ 2024

Author: Sushma Chakre

ಕಣ್ಣಿನ ಯೋಗಕ್ಷೇಮಕ್ಕೆ ನಾವು ತಿನ್ನುವ ಆಹಾರ ಕೂಡ ಕಾರಣವಾಗುತ್ತದೆ. ಕೆಲವು ಕಣ್ಣಿನ ಸಮಸ್ಯೆಗಳು ದೃಷ್ಟಿ ಕಳೆದುಕೊಳ್ಳಲು ಕೂಡ ಕಾರಣವಾಗಬಹುದು. ಉತ್ತಮ ದೃಷ್ಟಿಗೆ ಸಹಾಯ ಮಾಡುವ ಆಹಾರಗಳು ಇಲ್ಲಿವೆ.

ಕಣ್ಣಿನ ಆರೋಗ್ಯ

ಟೊಮ್ಯಾಟೋಗಳಲ್ಲಿ ಕಂಡುಬರುವ ಹಲವಾರು ಕ್ಯಾರೊಟಿನಾಯ್ಡ್‌ಗಳಲ್ಲಿ ಒಂದಾದ ಲೈಕೋಪೀನ್ ಹಣ್ಣಿನಲ್ಲಿರುವ ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ. ಕಣ್ಣಿನ ಅಂಗಾಂಶಗಳಲ್ಲಿ ಕಂಡುಬರುವ ಲೈಕೋಪೀನ್ ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳನ್ನು ಬೆಳಕಿನಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

ಟೊಮ್ಯಾಟೋ

ವಿಟಮಿನ್ ಎ, ಲುಟೀನ್, ಜಿಯಾಕ್ಸಾಂಥಿನ್ ಮತ್ತು ಸತುವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಇದು ಕಂಡುಬರುತ್ತದೆ.

ಮೊಟ್ಟೆಗಳು

ಗೆಣಸು ಬೀಟಾ ಕ್ಯಾರೋಟಿನ್‌ನ ಉತ್ತಮ ಮೂಲವಾಗಿದೆ. ವಿಟಮಿನ್ ಎ, ಒಣ ಕಣ್ಣುಗಳು ಮತ್ತು ರಾತ್ರಿ ಕುರುಡುತನವನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ಗೆಣಸು

ಪಾಲಕ್ ಪ್ರಬಲವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ನಮ್ಮ ಕಣ್ಣುಗಳ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಹಸಿರು ಸೊಪ್ಪು

ರೆಟಿನಾಗಳು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಒಮೆಗಾ-3 ಕೊಬ್ಬಿನಾಮ್ಲಗಳ ಎರಡು ರೂಪಗಳು DHA ಮತ್ತು EPAಯನ್ನು ಕೊಬ್ಬಿನ ಮೀನುಗಳಾದ ಸಾಲ್ಮನ್, ಟ್ಯೂನ ಮತ್ತು ಟ್ರೌಟ್‌ನಲ್ಲಿ ಪಡೆಯಬಹುದು.

ಮೀನು

ಕ್ಯಾರೆಟ್​​ನಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ವಿಟಮಿನ್ ಎ ಆಗಿ ರೂಪಾಂತರಗೊಳ್ಳುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ನಿರ್ಣಾಯಕ ಅಂಶವಾಗಿದೆ. ತೀವ್ರವಾದ ವಿಟಮಿನ್ ಎ ಕೊರತೆಯು ಕುರುಡುತನಕ್ಕೆ ಕಾರಣವಾಗಬಹುದು.

ಕ್ಯಾರೆಟ್