ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ವಿಶ್ವಾಸಾರ್ಹ ಮೂಲಗಳ ಪ್ರಕಾರ, ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಕಡಿಮೆ ಮಾಡಲು ಸರಿಯಾದ ಕೈ ನೈರ್ಮಲ್ಯವು ಅತ್ಯಗತ್ಯ.
ಕೈಗಳ ಸ್ವಚ್ಛತೆ
ಕೈ ತೊಳೆಯುವುದರಿಂದ ಕೆಲವು ಉಸಿರಾಟದ ಮತ್ತು ಜಠರಗರುಳಿನ ಸೋಂಕುಗಳ ಪ್ರಮಾಣವನ್ನು ಕ್ರಮವಾಗಿ ಶೇ. 23 ಮತ್ತು ಶೇ. 48ರಷ್ಟು ನಿಯಂತ್ರಿಸಬಹುದು ಎಂದು ಸಂಶೋಧನೆ ತಿಳಿಸಿದೆ.
ಏಕೆ ಕೈ ತೊಳೆಯಬೇಕು?
ಕೊರೊನಾವೈರಸ್ ರೀತಿಯ ಸೋಂಕುಗಳು ಹರಡುವುದನ್ನು ತಡೆಯಲು ನಿಮ್ಮ ಕೈಗಳನ್ನು ಆಗಾಗ ತೊಳೆಯುವುದು ಮುಖ್ಯವಾಗಿದೆ.
ಸೋಂಕು ಹರಡುತ್ತದೆ
ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯುವ ಪ್ರಮುಖ ಹಂತಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹಂತಗಳು ಹೀಗಿವೆ
ನಿಮ್ಮ ಕೈಗಳನ್ನು ಸ್ವಚ್ಛವಾದ ಹಾಗೂ ನಲ್ಲಿ ಅಥವಾ ಹರಿಯುವ ನೀರಿನಲ್ಲಿ ತೊಳೆದುಕೊಳ್ಳಿ. ನಿಂತ ನೀರು ಒಳ್ಳೆಯದಲ್ಲ.
ಸರಿಯಾದ ಕ್ರಮ
ನಿಮ್ಮ ಕೈ ಮತ್ತು ಮಣಿಕಟ್ಟಿನ ಎಲ್ಲಾ ಕಡೆಗೂ ಸರಿಯಾಗಿ ಸೋಪ್ ಹಚ್ಚಿಕೊಳ್ಳಿ. ಬಳಿಕ ನಿಮ್ಮ ಕೈಗಳನ್ನು ಸಂಪೂರ್ಣವಾಗಿ ಉಜ್ಜಿಕೊಳ್ಳಿ.
ಸೋಪ್ ಹಚ್ಚಿ
ನಿಮ್ಮ ಕೈಗಳು, ಬೆರಳ ತುದಿಗಳು, ಬೆರಳಿನ ಉಗುರುಗಳು ಮತ್ತು ಮಣಿಕಟ್ಟುಗಳನ್ನು ಉಜ್ಜಿ ಸರಿಯಾಗಿ ಸ್ವಚ್ಛ ಮಾಡಿಕೊಳ್ಳಿ.
ಬೆರಳನ್ನೂ ಸ್ವಚ್ಛಗೊಳಿಸಿ
ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳು ಮತ್ತು ಮಣಿಕಟ್ಟುಗಳನ್ನು ಸೋಪ್ನಿಂದ ಸ್ಕ್ರಬ್ ಮಾಡಿ. ಬಳಿಕ ನಿಮ್ಮ ಕೈಗಳು ಮತ್ತು ಮಣಿಕಟ್ಟುಗಳನ್ನು ಸ್ವಚ್ಛವಾಗಿ ನೀರಿನಿಂದ ತೊಳೆದುಕೊಳ್ಳಿ.
ಎಷ್ಟು ಹೊತ್ತು ಕೈ ತೊಳೆಯಬೇಕು?
ನಿಮ್ಮ ಕೈಗಳು ಮತ್ತು ಮಣಿಕಟ್ಟುಗಳನ್ನು ಸ್ವಚ್ಛವಾದ ಟವೆಲ್ನಿಂದ ಒಣಗಿಸಿಕೊಳ್ಳಿ. ಅಥವಾ ಗಾಳಿಯಲ್ಲಿ ಒಣಗಲು ಬಿಡಿ. ನಂತರ ನಲ್ಲಿಯನ್ನು ಆಫ್ ಮಾಡಲು ಟವೆಲ್ ಬಳಸಿ. ತೊಳೆದ ಕೈಗಳಿಂದ ನಲ್ಲಿಯನ್ನು ಆಫ್ ಮಾಡಿದರೆ ಮತ್ತೆ ಅದರಲ್ಲಿರುವ ಸೋಂಕು ನಿಮ್ಮ ಕೈಗೆ ಅಂಟಿಕೊಳ್ಳುತ್ತದೆ.