ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳು ತಮ್ಮ ದಿನಚರಿಯಲ್ಲಿ ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು. ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು, ಚಯಾಪಚಯವನ್ನು ಸುಧಾರಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಯಮಿತ ವ್ಯಾಯಾಮ
ಸಮತೋಲಿತ ಮತ್ತು ಪೌಷ್ಠಿಕಾಂಶದ ಆಹಾರವನ್ನು ಅಳವಡಿಸಿಕೊಳ್ಳುವುದರಿಂದ ಅಧಿಕ ತೂಕವನ್ನು ನಿಯಂತ್ರಿಸಬಹುದು. ಇದು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್ ಮತ್ತು ಧಾನ್ಯಗಳ ಮಿಶ್ರಣವನ್ನು ಒಳಗೊಂಡಿರುತ್ತದೆ.
ಸಮತೋಲನ ಆಹಾರ
ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಕೂಡ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ನಿದ್ರೆಯ ಕೊರತೆಯು ಹಸಿವು ಮತ್ತು ಅತಿಯಾಗಿ ತಿನ್ನಬೇಕೆನಿಸುವ ಭಾವನೆಯನ್ನು ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಉತ್ತಮ ನಿದ್ರೆ
ನಾವು ಏನು ತಿನ್ನುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಿಂದರೆ ನಮ್ಮ ಹೊಟ್ಟೆ ತುಂಬಿದ ಕೂಡಲೆ ನಮ್ಮ ಅರಿವಿಗೆ ಬರುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮನಸಿಟ್ಟು ತಿನ್ನುವುದು
ಸಮರ್ಪಕವಾಗಿ ದೇಹವನ್ನು ಹೈಡ್ರೀಕರಿಸಿರುವುದು ನಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ನಮ್ಮ ಬಾಯಾರಿಕೆಯನ್ನು ಕೆಲವೊಮ್ಮೆ ಹಸಿವು ಎಂದು ತಪ್ಪಾಗಿ ಗ್ರಹಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ಜನರು ಸಾಮಾನ್ಯವಾಗಿ ದಿನವಿಡೀ ಆಗಾಗ ನೀರು ಕುಡಿಯಲು ಮರೆಯಬಾರದು.
ಹೈಡ್ರೇಟ್ ಮಾಡುವುದು
ನಿಯಮಿತ ಊಟದ ಸಮಯವನ್ನು ರೂಢಿಸಿಕೊಳ್ಳುವುದು ಮತ್ತು ಅತಿಯಾಗಿ ತಿಂಡಿಗಳನ್ನು ತಿನ್ನುವುದನ್ನು ಅವಾಯ್ಡ್ ಮಾಡುವುದರಿಂದ ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಂದೇ ಊಟದ ಸಮಯ
ಧ್ಯಾನ, ಯೋಗ ಅಥವಾ ದೀರ್ಘವಾದ ಉಸಿರಾಟದ ವ್ಯಾಯಾಮಗಳಂತಹ ಒತ್ತಡವನ್ನು ಕಡಿಮೆಗೊಳಿಸುವ ತಂತ್ರಗಳನ್ನು ಅಭ್ಯಾಸ ಮಾಡಿದರೆ ಒತ್ತಡವನ್ನು ನಿಯಂತ್ರಿಸಬಹುದು. ಇಲ್ಲವಾದರೆ ದೀರ್ಘಕಾಲದ ಒತ್ತಡವು ತೂಕ ಹೆಚ್ಚಾಗಲು ಕಾರಣವಾಗಬಹುದು.
ಒತ್ತಡ ನಿರ್ವಹಣೆ
ವ್ಯಾಯಾಮದ ಜೊತೆಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ಜನರು ಸಾಮಾನ್ಯವಾಗಿ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ವಾಕಿಂಗ್ ಅಥವಾ ಸೈಕ್ಲಿಂಗ್ ಮುಂತಾದ ದೈಹಿಕ ಚಟುವಟಿಕೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.