ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು

3 February 2025

Pic credit - Pintrest

Preethi Bhat

ಬಾಳೆಹಣ್ಣಿನಲ್ಲಿರುವ ನಾರಿನಂಶವು ಆಹಾರವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಸಹಾಯ ಮಾಡುತ್ತದೆ. ಇದರಿಂದ ಮಲವಿಸರ್ಜನೆಯೂ ಸರಿಯಾಗಿ ಆಗುತ್ತದೆ.

Pic credit - Pintrest

ಸೇಬು ಹಣ್ಣು ಜೀರ್ಣಕ್ರಿಯೆಗೆ ಒಳ್ಳೆಯದು ಏಕೆಂದರೆ ಇದರಲ್ಲಿರುವ ನಾರಿನಂಶ ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗುವಂತೆ ಮಾಡುತ್ತದೆ.

Pic credit - Pintrest

ಬಾದಾಮಿ ನಾರಿನ ಸಮೃದ್ಧ ಮೂಲವಾಗಿದ್ದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಅದರಲ್ಲಿಯೂ ನೆನೆಸಿದ ಬಾದಾಮಿ ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Pic credit - Pintrest

ಮೊಸರು ಜೀರ್ಣಕ್ರಿಯೆಗೆ ಒಳ್ಳೆಯದು. ಇದರಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.

Pic credit - Pintrest

ರಾತ್ರಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.

Pic credit - Pintrest

ಇನ್ನು ಹಸಿರು ತರಕಾರಿಗಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಏಕೆಂದರೆ ಇವುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ ಹಾಗಾಗಿ ಅಜೀರ್ಣತೆ ಸಮಸ್ಯೆ ಇದ್ದರೆ ಹಸಿರು ತರಕಾರಿಗಳ ಸೇವನೆ ಮಾಡಿ.

Pic credit - Pintrest

ಶುಂಠಿ ಜೀರ್ಣಕ್ರಿಯೆಗೆ ಹೆಸರುವಾಸಿಯಾಗಿದ್ದು, ಇದು ವಾಕರಿಕೆಯನ್ನು ಕಡಿಮೆ ಮಾಡಿ ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಅರಿಶಿನವೂ ಕೂಡ ಜೀರ್ಣಕ್ರಿಯೆಗೆ ಒಳ್ಳೆಯದು.

Pic credit - Pintrest

ಈ ತರಕಾರಿ ನೀರನ್ನು ಕುಡಿಯಿರಿ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಿ