ಈ ತರಕಾರಿ ನೀರನ್ನು ಕುಡಿಯಿರಿ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಿ
1 February 2025
Pic credit - Pintrest
Preethi Bhat
ಬೆಂಡೆಕಾಯಿಯಿಂದ ಸಾರು, ಸಾಂಬಾರ್, ಪಲ್ಯ ಮಾಡಿ ತಿಂದಿರಬಹುದು. ಆದರೆ ಎಂದಾದರೂ ಬೆಂಡೆಕಾಯಿ ನೀರನ್ನು ಕುಡಿದಿದ್ದೀರಾ?
Pic credit - Pintrest
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಮಲಬದ್ಧತೆಯಿಂದ ಪರಿಹಾರ ನೀಡುವುದಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Pic credit - Pintrest
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಇರುವ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
Pic credit - Pintrest
ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
Pic credit - Pintrest
ಬೆಂಡೆಕಾಯಿಯ ನೀರು ಗ್ಯಾಸ್, ಅಜೀರ್ಣ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುವುದಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
Pic credit - Pintrest
ಬೆಂಡೆಕಾಯಿ ನೀರು ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.
Pic credit - Pintrest
ಬೆಂಡೆಕಾಯಿ ನೀರಿನಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಚರ್ಮಕ್ಕೂ ಒಳ್ಳೆಯದು.
Pic credit - Pintrest
ನಾವೆಲ್ಲರೂ ಒಗ್ಗೂಡಿ 'ಫಿಟ್ ಇಂಡಿಯಾ'ನಿರ್ಮಿಸೋಣ" ಪ್ರಧಾನಿ ಮೋದಿ