ನಾವೆಲ್ಲರೂ ಒಗ್ಗೂಡಿ 'ಫಿಟ್ ಇಂಡಿಯಾ'ನಿರ್ಮಿಸೋಣ" ಪ್ರಧಾನಿ ಮೋದಿ
30 January 2025
Pic credit - Pintrest
Preethi Bhat
ಪ್ರಧಾನಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಥೂಲಕಾಯತೆಯ ಬಗ್ಗೆ ಮಾತನಾಡಿದ್ದು ದೇಶದಲ್ಲಿ ಬೊಜ್ಜಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ.
Pic credit - Pintrest
ದೇಶದಲ್ಲಿ ಬೊಜ್ಜಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅಂಕಿಅಂಶಗಳು ಕೂಡ ಇದನ್ನು ಸಾಬೀತು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬರೂ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು ಎಂದು ಕರೆನೀಡಿದ್ದಾರೆ.
Pic credit - Pintrest
ಬೊಜ್ಜು ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ 'ಫಿಟ್ ಇಂಡಿಯಾ' ಆಂದೋಲನದ ಮೂಲಕ ಯುವಕರು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಬೇಕು.
Pic credit - Pintrest
ಜೀವನದಲ್ಲಿ ದೈಹಿಕ ಚಟುವಟಿಕೆ, ಶಿಸ್ತು ಮತ್ತು ಸಮತೋಲಿತ ಆಹಾರದ ಬಗ್ಗೆ ಗಮನ ಹರಿಸಬೇಕು. ಪ್ರತಿದಿನ ವ್ಯಾಯಾಮಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎಂದು ಹೇಳಿದ್ದಾರೆ.
Pic credit - Pintrest
ನಾವು ಸೇವನೆ ಮಾಡುವ ಆಹಾರದಲ್ಲಿ ಎಣ್ಣೆ ಅಂಶ ಕಡಿಮೆ ಇರಬೇಕು. ಪ್ರತಿ ತಿಂಗಳು ಎರಡು ಲೀಟರ್ ಅಡುಗೆ ಎಣ್ಣೆಯನ್ನು ಬಳಸುತ್ತಿದ್ದರೆ. ಅದನ್ನು ಶೇ.10ರಷ್ಟು ಕಡಿಮೆ ಮಾಡಿಕೊಳ್ಳಿ ಎಂದು ಪ್ರಧಾನಿ ಹೇಳಿದ್ದಾರೆ.
Pic credit - Pintrest
ಇಂತಹ ಸಣ್ಣ ಸಣ್ಣ ಮನೆಮದ್ದುಗಳಿಂದ ನಿಮ್ಮ ದೇಹದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ಆರೋಗ್ಯಕರ ದೇಹದಿಂದ ಮಾತ್ರ ಆರೋಗ್ಯಕರ ಮನಸ್ಸು ಮತ್ತು ರಾಷ್ಟ್ರವನ್ನು ರಚಿಸಬಹುದು ಎಂದಿದ್ದಾರೆ.
Pic credit - Pintrest
ಹಾಗಾಗಿ ರಾಜ್ಯ ಸರ್ಕಾರಗಳು, ಶಾಲೆ, ಕಚೇರಿಗಳು ಮತ್ತು ರಾಜಕಾರಣಿಗಳು ಜನರಿಗೆ ಅರಿವು ಮೂಡಿಸುವುದರ ಜೊತೆಗೆ ನಾವೆಲ್ಲರೂ ಒಗ್ಗೂಡಿ 'ಫಿಟ್ ಇಂಡಿಯಾ'ವನ್ನು ನಿರ್ಮಿಸೋಣ" ಎಂದು ಪ್ರಧಾನಿ ಮೋದಿ ಹೇಳಿದರು.