Author: Sushma Chakre

ಅಸ್ತಮಾದಿಂದ ಕ್ಯಾನ್ಸರ್​ವರೆಗೆ; ಗ್ರೀನ್​ ಆ್ಯಪಲ್​ನ ಉಪಯೋಗಗಳಿವು

13 Dec 2023

Author: Sushma Chakre

ಕೆಂಪು ಸೇಬು ಹಣ್ಣಿಗಿಂತಲೂ ಹಸಿರು ಸೇಬಿನಲ್ಲಿ ಪೌಷ್ಟಿಕಾಂಶಗಳು ಕೊಂಚ ಹೆಚ್ಚೇ ಇರುತ್ತದೆ. ಅದರಲ್ಲೂ ಮಧುಮೇಹಿಗಳಿಗೆ ಗ್ರೀನ್ ಆ್ಯಪಲ್ ಅತ್ಯುತ್ತಮವಾದ ಹಣ್ಣು.

ಕೆಂಪು ಸೇಬಿಗಿಂತಲೂ ಹಸಿರು ಸೇಬು ಬೆಸ್ಟ್

ಹಸಿರು ಸೇಬು ಒಂದು ಹೈಬ್ರೀಡ್ ಹಣ್ಣು. ಮಾಲಸ್ ಸ್ಲೈವೆಸ್ಟರಸ್ ಮತ್ತು ಮಾಲಸ್ ಡೊಮೆಸ್ಟಿಕಸ್ ಎಂಬ 2 ವಿಭಿನ್ನ ಜಾತಿಯ ಸೇಬುಗಳನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಹೈಬ್ರಿಡ್ ಹಣ್ಣು

ಗ್ರೀನ್ ಆ್ಯಪಲ್ ಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ, ಹೆಚ್ಚು ಫೈಬರ್ ಇರುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ.

ಮಧುಮೇಹಿಗಳಿಗೆ ಉತ್ತಮ

ಹಸಿರು ಸೇಬಿನಲ್ಲಿ ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದು ಶ್ವಾಸಕೋಶ, ಮೇದೋಜೀರಕ ಗ್ರಂಥಿ ಮತ್ತು ಕರುಳಿನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಸೇಬು ಸ್ತನ ಕ್ಯಾನ್ಸರ್, ಕೊಲೊನ್ ಮತ್ತು ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ನಿಯಂತ್ರಣ

ಹಸಿರು ಸೇಬಿನ ರಸವು ಮೆದುಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಹೊಂದಿರುವ ಆಹಾರವಾಗಿರುವ ಹಸಿರು ಸೇಬುಗಳನ್ನು ತಿನ್ನುವುದು ಮೆದುಳಿನ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಗ್ರೀನ್ ಆ್ಯಪಲ್ ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಪೂರಕ

ಹಸಿರು ಸೇಬಿನ ಸೇವನೆಯು ಆಸ್ತಮಾ ಸೇರಿದಂತೆ ಅನೇಕ ಶ್ವಾಸಕೋಶದ ಸಮಸ್ಯೆಗಳನ್ನು ತಡೆಯುತ್ತದೆ. ಹಸಿರು ಸೇಬುಗಳ ಸೇವನೆಯು ಅಸ್ತಮಾ ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಉಸಿರಾಟದ ತೊಂದರೆಗೆ ಪರಿಹಾರ

ಹಸಿರು ಸೇಬಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹಸಿರು ಸೇಬಿನಲ್ಲಿ ಕ್ವೆರ್ಸೆಟಿನ್ ಎಂಬ ಅಂಶವಿದೆ. ಹಸಿರು ಬಣ್ಣದ ಸೇಬು ಸೇವಿಸುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ ಮದ್ದು

ಹಸಿರು ಸೇಬಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ವಯಸ್ಸಾದಂತೆ ಮಹಿಳೆಯರಲ್ಲಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ಈ ಸಮಯದಲ್ಲಿ ಗ್ರೀನ್ ಆ್ಯಪಲ್ ಸೇವಿಸಿದರೆ ಮೂಳೆಗಳು ಬಲಗೊಳ್ಳುತ್ತವೆ.

ಮೂಳೆಗಳ ಆರೋಗ್ಯಕ್ಕೆ ಅಗತ್ಯ