ಹಲ್ಲು ನೋವಿಗೆ ಅಜ್ಜಿ ಹೇಳಿದ ಮನೆಮದ್ದು
23 October 2024
Pic credit - Pinterest
Preethi Bhat
ಹಲ್ಲು ನೋವಿಗೆ ನಾನಾ ರೀತಿಯ ಔಷಧಗಳನ್ನು ಬಳಸುವ ಬದಲು ಅಜ್ಜಿ ಹೇಳಿರುವ ಈ ಮನೆಮದ್ದನ್ನು ಮಾಡಿ ನೋಡಿ.
Pic credit - Pinterest
ಉತ್ತರ ಕರ್ನಾಟಕದ ಭಾಗದಲ್ಲಿ ಬೆಳೆಯುವ, ತೊಗರಿ ಗಿಡವನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಸುತ್ತಾರೆ.
Pic credit - Pinterest
ಅತಿಯಾಗಿ ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಗಿಡದ ಎಲೆಗಳಿಂದ ಪರಿಹಾರ ಪಡೆಯಬಹುದು.
Pic credit - Pinterest
ತೊಗರಿ ಗಿಡದ ಚಿಗುರು ಎಲೆಯನ್ನು ತಂದು ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿ.
Pic credit - Pinterest
ಈ ರೀತಿ ಮಾಡಿಟ್ಟುಕೊಂಡ ಪೇಸ್ಟ್ ಅನ್ನು ಹಲ್ಲು ನೋವಿರುವ ಜಾಗದಲ್ಲಿ ಇಡುತ್ತಾ ಬನ್ನಿ. ಇದರಿಂದ ನೋವು ಶಮನವಾಗುತ್ತದೆ.
Pic credit - Pinterest
ಇದು ಗ್ರಾಮೀಣ ಭಾಗದಲ್ಲಿ ಪ್ರಚಲಿತ ಇರುವಂತಹ ಔಷಧಿ. ನೀವು ಮಾಡಿ ನೋಡಿ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ.
Pic credit - Pinterest
ಈ ಔಷಧ ಮಾಡಿದ ಮೇಲೂ ನೋವು ಕಡಿಮೆಯಾಗದಿದ್ದರೆ ಹತ್ತಿರದ ದಂತ ವೈದ್ಯರನ್ನು ಸಂಪರ್ಕಿಸಿ.
Pic credit - Pinterest
Mext: ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಡಲು ಈ ರೀತಿ ಮಾಡಿ