ಅಂಜೂರ ಹಣ್ಣು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
19-11-2023
ಅಂಜೂರ ಹಣ್ಣುಗಳಲ್ಲಿ ಪೌಷ್ಟಿಕಾಂಶದ ಮೌಲ್ಯಗಳು ಹೆಚ್ಚಿವೆ. ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಆಹಾರದ ಫೈಬರ್‌ಗಳಿಂದ ಸಮೃದ್ಧವಾಗಿದೆ.
ಅಂಜೂರ
ಕೆಮ್ಮು, ದಮ್ಮು ಇರುವವರು ಅಂಜೂರವನ್ನು ಕೆಲವು ದಿನ ಪ್ರತಿನಿತ್ಯ ಸೇವಿಸುವುದರಿಂದ ಕಫ ಹೊರಗೆ ಬರಲು ಸಹಾಯವಾಗುತ್ತದೆ.
ಕಫ ನಿವಾರಣೆ
ಅಂಜೂರ ಆಹಾರದ ಫೈಬರ್‌ನ ಉತ್ತಮ ಮೂಲ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ
ಅಂಜೂರ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತೆ
ರಕ್ತಹೀನತೆ ಇರುವವರು ಪ್ರತಿನಿತ್ಯ 2 ಅಂಜೂರ ಹಣ್ಣುಗಳನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.
ರಕ್ತವೃದ್ಧಿ
ಅಂಜೂರದಲ್ಲಿರುವ ಹೆಚ್ಚಿನ ಫೈಬರ್ ಅಂಶವು ಅತ್ಯಾಧಿಕತೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
ತೂಕ ನಿರ್ವಹಣೆ
ಅಂಜೂರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದ್ದು, ಮೂಳೆಯ ಆರೋಗ್ಯಕ್ಕೆ ಸಹಾಯಕ.
ಮೂಳೆ ಆರೋಗ್ಯಕ್ಕೆ ಸಹಾಯಕ
ಅಂಜೂರವು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಮತ್ತು ಒಟ್ಟಾರೆ ಕ್ಷೇಮವನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.
ಉತ್ಕರ್ಷಣ ನಿರೋಧಕ ಶಕ್ತಿ
ಅಪರೂಪದ ಈ ಕಪ್ಪು ಸೇಬಿನ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ?
ಇದನ್ನೂ ಓದಿ