ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಅನೇಕ ಆರೋಗ್ಯ ಪ್ರಯೋಜನ

05-11-2013

ಸಸ್ಯಾಹಾರಿಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್ ಕೊಡುವ ಆಹಾರದಲ್ಲಿ ಕಡಲೇಕಾಯಿ ಎರಡನೇ ಸ್ಥಾನದಲ್ಲಿದೆ. ಡ್ರೈಫ್ರೂಟ್ಸ್ ಗಳಂತೆ ಕಡಲೇಕಾಯಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. 

ಪ್ರೊಟೀನ್ ಇರುವ ಆಹಾರ

ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿನ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.

ರಕ್ತನಾಳಕ್ಕೆ ಒಳ್ಳೇದು

ನೀರಿನಲ್ಲಿ ನೆನೆಸಿ ಇಟ್ಟ ಕಡಲೆ ಬೀಜಗಳನ್ನು ಬೆಳಿಗ್ಗೆ ಸೇವಿಸುವುದರಿಂದ ಬೊಜ್ಜು ಕಡಿಮೆ ಆಗುತ್ತದೆ. ತೂಕ ನಿಯಂತ್ರಣಕ್ಕೆ ಕಡಲೆ ಬೀಜ ಸಹಾಯಕಾರಿ.

ತೂಕ ನಷ್ಟ 

ಕಡಲೆಕಾಯಿ ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ, ತ್ವಚೆಯು ಆರೋಗ್ಯಕರವಾಗಿ ಇರುತ್ತದೆ. ಕಡಲೆ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಸುಕ್ಕುಗಳು ಮಾಯವಾಗುತ್ತವೆ.

ಚರ್ಮದ ಕಾಂತಿ

ಪ್ರತಿದಿನವೂ ಒಂದು ಮುಷ್ಠಿಯಷ್ಟು ಕಡಲೆ ಬೀಜಗಳನ್ನು ತಿಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣವಾಗುತ್ತೆ. ಇದು ಮಧುಮೇಹಿಗಳಿಗೆ ವರದಾನ.  

ಮಧುಮೇಹಿಗಳಿಗೆ ವರದಾನ

ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆಯನ್ನು ಮಾಡಿದರೆ ಉತ್ತಮ. 

ಪೈಲ್ಸ್ ನಿವಾರಣೆ

ನೆಲಗಡಲೆ ಸೇವನೆ ಮಾಡುವುದರಿಂದ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಸಂಶೋಧನೆ ಹೇಳಿದೆ.

ಜೀವಿತಾವಧಿ ಹೆಚ್ಚಳ

ಕಡಲೆಕಾಯಿಯಲ್ಲಿ ಅತ್ಯಧಿಕ ನಾರಿನಾಂಶವನ್ನು ಒಳಗೊಂಡ ಕಾರಣ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಊರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ.

ಉರಿಯೂತ ನಿವಾರಣೆ

ದಿನಕ್ಕೆ ಎಷ್ಟು ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು