02-12-2023
ನ್ಯುಮೋನಿಯಾ; ಕೋವಿಡ್
ಗೆ ಅನುಸರಿಸಿದ್ದ ಪ್ರೈಮರಿ ಅಲರ್ಟ್ ಪಾಲಿಸಲು ಆರೋಗ್ಯ ಇಲಾಖೆ ಸೂಚನೆ
Author: Ayesha
ಚೀನಾದಲ್ಲಿ ನ್ಯುಮೋನಿಯಾ ಉಲ್ಭಣ ಹಿನ್ನೆಲೆ ದೇಶದಾದ್ಯಂತ ಆರೋಗ್ಯಧಿಕಾರಿಗಳಿ ಹೈ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಉಸಿರಾಟ ತೊಂದರೆ ಸಂಬಂಧ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ವೈದ್ಯಕೀಯ ಸೇವೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದಲ್ಲೂ ತಯಾರಿ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಸಾರಿ ಕೇಸ್ ಗಳ ಮೇಲೆ ಅಲರ್ಟ್.
ಸದ್ಯ ಜಿಲ್ಲೆಯಲ್ಲಿ ಸರಾಸರಿಗಿಂತ ಹೆಚ್ಚು ಜ್ವರದ ಕೇಸ್ ಗಳು ಬರುತ್ತಿಲ್ಲ. ಗಡಿಯಲ್ಲಿ ತಪಾಸಣೆ ಮಾಡುವ ಅಗತ್ಯವಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ ಗೆ ಅನುಸರಿಸಿದ ಪ್ರೈಮರಿ ಅಲರ್ಟ್ ಪಾಲಿಸಲು ಜನರಿಗೆ ಸೂಚನೆ ನೀಡಲಾಗಿದೆ.
ನ್ಯುಮೋನಿಯಾ ಹರಡುವಂತಹ ಖಾಯಿಲೆಯಾಗಿದ್ದು ಸಾಮಾನ್ಯವಾಗಿ 5 ರಿಂದ 7 ದಿನಗಳವರೆಗೆ ಇರುತ್ತೆ.
ಎಳೆ ಮಕ್ಕಳಿಗೆ, ವಯಸ್ಸಾದವ್ರಿಗೆ, ಗರ್ಭಿಣಿಯರಿಗೆ, ಇಮ್ಯುನಿಟಿ ವೀಕ್ ಇದ್ದವ್ರಿಗೆ ಹಾಗೂ ದೀರ್ಘಕಾಲದಿಂದ ಮೆಡಿಕೇಷನ್‌ನಲ್ಲಿರೋರಿಗೆ ಇದ್ರಿಂದ ಹೈ ರಿಸ್ಕ್ ಇದೆ.
ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಈ ವೇಳೆ ನ್ಯುಮೋನಿಯಾದಿಂದ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡುಬರಬಹುದು.
Next: ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ