ದಿನನಿತ್ಯ 1 ಚಮಚ ಸೂರ್ಯಾಕಾಂತಿ ಬೀಜ ತಿನ್ನಿ; ಪ್ರಯೋಜನ ಸಾಕಷ್ಟಿವೆ

 28 July 2024

Pic credit - Pintrest 

Author : Akshatha Vorkady

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ, ಸತು ಮತ್ತು ಸೆಲೆನಿಯಂ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

ರೋಗನಿರೋಧಕ ಶಕ್ತಿ

Pic credit - Pintrest 

ಸೂರ್ಯಕಾಂತಿ ಬೀಜಗಳ ಫೈಬರ್ ಅಂಶವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ

Pic credit - Pintrest 

ಸೂರ್ಯಕಾಂತಿ ಬೀಜಗಳಲ್ಲಿರುವ ಬೀಟಾ-ಸಿಟೊಸ್ಟೆರಾಲ್ ಎಂಬ ಫೈಟೊಸ್ಟೆರಾಲ್ ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಕರುಳಿನ ಕ್ಯಾನ್ಸರ್ ಸಾಧ್ಯತೆ ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ತಡೆ

Pic credit - Pintrest 

ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸೂರ್ಯಕಾಂತಿ ಬೀಜಗಳು ಉಪಯುಕ್ತವಾಗಿವೆ.

ಮಧುಮೇಹದ ನಿರ್ವಹಣೆ

Pic credit - Pintrest 

ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್ ಬಿ 6 ಮಾನಸಿಕ ಆರೋಗ್ಯ ಸುಧಾರಿಸುತ್ತದೆ, ಏಕಾಗ್ರತೆ ಮತ್ತು ಸ್ಮರಣೆಯ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯ

Pic credit - Pintrest 

ಈ ಬೀಜಗಳ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಚಟುವಟಿಕೆಯು ಸೋಂಕುಗಳನ್ನು ತಡೆಯುತ್ತದೆ, ಇದರಿಂದಾಗಿ ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.

ಚರ್ಮಕ್ಕೆ ಒಳ್ಳೆಯದು

Pic credit - Pintrest 

ನೆತ್ತಿಯ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.

ಕೂದಲ ಬೆಳವಣಿಗೆ

Pic credit - Pintrest