ಹಲ್ಲಿನ ಸ್ವಚ್ಛತೆಯನ್ನು, ಸರಿಯಾಗಿ ನಿರ್ವಹಿಸದೆ ಇದ್ದಾಗ ಹಲ್ಲು ಬಹುಬೇಗ ಹುಳುಕಾಗುವುದು ಹಾಗೂ ವಿಪರೀತ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ.
Pic credit - pinterest
ಪರಿಣಾಮಕಾರಿ ಸಲಹೆ
ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆಯನ್ನು ದೂರ ಮಾಡುವ ಕೆಲವೊಂದು ಪರಿಣಾಮಕಾರಿಯಾದ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
Pic credit - pinterest
ಬೇವಿನ ಎಲೆ
ಬೇವಿನ ಎಲೆಗಳನ್ನು, ಸ್ವಲ್ಪ ಜಗಿದು ತಿನ್ನಬೇಕು ಇದು ಬಾಯಿಯ ದುರ್ವಾಸನೆಯನ್ನು ಜೊತೆಗೆ ಹುಳುಕು ಹಲ್ಲಿನ ನೋವನ್ನು ದೂರ ಮಾಡುತ್ತದೆ.
Pic credit - pinterest
ಲವಂಗ ಮತ್ತು ಉಪ್ಪು
ಹಲ್ಲು ನೋವು ಇದ್ದ ಕಡೆ ಎರಡು ಲವಂಗ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಆ ಜಾಗದಲ್ಲಿ ಇಟ್ಟುಕೊಳ್ಳಿ.
Pic credit - pinterest
ಲವಂಗ
ಹಲ್ಲು ನೋವು ಇದ್ದ ಜಾಗದಲ್ಲಿ ಲವಂಗ ಇಟ್ಟು ಜಗಿದರೆ ಆ ರಸ ನೋವನ್ನು ಬಹುಬೇಗ ಶಮನ ಮಾಡುತ್ತದೆ.
Pic credit - pinterest
ಬಿಸಿ ನೀರಿಗೆ ಉಪ್ಪು
ಒಂದು ಲೋಟ ಕಪ್ ಉಗುರು ಬೆಚ್ಚಗಿನ ನೀರಿಗೆ ಒಂದು ಸಣ್ಣ ಚಮಚ ಆಗುವಷ್ಟು ಉಪ್ಪನ್ನು ಬೆರೆಸಿ, ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ.
Pic credit - pinterest
ಜೇಷ್ಠ ಮಧು
ಜೇಷ್ಠ ಮಧುವನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ, ಬೆಳಗ್ಗೆ ಎದ್ದ ಕೂಡಲೇ ಆ ನೀರಿನಿಂದ ಬಾಯಿ ಮುಕ್ಕಳಿಸಿ ಉಗಿಯಬೇಕು ಈ ರೀತಿ ಮಾಡುವುದರಿಂದ ಹುಳುಕು ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ.