ಮುದ್ದು ಕಂದಮ್ಮನಿಗೆ ಸೋಪು, ಶಾಂಪೂ ಬಳಸುವ ಬದಲು ಈ  ಹಿಟ್ಟನ್ನು ಬಳಸಿ

11 JULY 2024

Pic credit -pinterest

Preeti Bhatt

ಪ್ರತಿಯೊಂದು ಶಿಶುವಿನ ಚರ್ಮ ತುಂಬಾ ಸೂಕ್ಷ್ಮವಾಗಿ ಇರುವುದರಿಂದ ಆರೈಕೆ ತುಂಬಾ ಅವಶ್ಯವಾಗಿರುತ್ತದೆ.  

Pic credit -pinterest

ಹುಟ್ಟಿನಿಂದ ಒಂದು ವರ್ಷದವರೆಗೂ ಕಂದಮ್ಮನಿಗೆ ಎಣ್ಣೆ ಸ್ನಾನವೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.  

Pic credit -pinterest

ಇನ್ನು ಶಾಂಪೂ, ಸೋಪ್ ಬದಲಿಗೆ ಮನೆಯಲ್ಲಿಯೇ ಇರುವ ಹಿಟ್ಟುಗಳನ್ನು ಬಳಸಿಕೊಂಡು ಮಗುವಿನ ಸ್ನಾನಕ್ಕಾಗಿ ಬಳಸಬಹುದು.

Pic credit -pinterest

ಹೆಸರು ಕಾಳಿನ  ಹಿಟ್ಟು, ಕಡ್ಲೆ ಹಿಟ್ಟು, ಮೆಂತ್ಯ ಹಿಟ್ಟು, ಅಕ್ಕಿ ಹಿಟ್ಟನ್ನು ಶಿಶುವಿನ ದೇಹವನ್ನು ಸ್ವಚ್ಛ ಮಾಡಲು ಬಳಸಿಕೊಳ್ಳಬಹುದು.

Pic credit -pinterest

ಈ ಹಿಟ್ಟನ್ನು ಒಂದು ಬಟ್ಟೆಯಲ್ಲಿ ಚೆನ್ನಾಗಿ ಗಾಳಿಸಿಕೊಂಡು ಅಥವಾ ಸಾಣಿಸಿಕೊಂಡು ಒಂದು ಡಬ್ಬದಲ್ಲಿ ತುಂಬಿಸಿ ಇಟ್ಟುಕೊಳ್ಳಿ.

Pic credit -pinterest

ಮಗುವಿಗೆ ಸ್ನಾನ ಮಾಡಿಸುವಾಗ ಈ ಹಿಟ್ಟನ್ನು ನಿಧಾನವಾಗಿ ಮೈಗೆ ಸವರಿ, ಬಳಿಕ ಸ್ನಾನ ಮಾಡಿಸಬೇಕು.

Pic credit -pinterest

ಇದು ಮಗುವಿನ ಆರೋಗ್ಯಕ್ಕೂ ಹಾಗೂ ಬೆಳವಣಿಗೆಗೆ ಸಹಾಯಕಾರಿಯಾಗಿದೆ.

Pic credit -pinterest