40ರ ನಂತರ ಸ್ತನಗಳ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

18 October 2024

Pic credit - Pinterest

Preethi Bhat

ನೀವೇ ಮಾಸಿಕವಾಗಿ ಸ್ತನ ಪರೀಕ್ಷೆ ಮಾಡಿಕೊಳ್ಳಿ. ಇದರಿಂದ ಸ್ತನದಲ್ಲಿ ಉಂಡೆಗಳು, ಊತ, ಚರ್ಮದಲ್ಲಿ ಬದಲಾವಣೆಗಳನ್ನು ಗುರುತಿಸಬಹುದು.

Pic credit - Pinterest

ಹಣ್ಣು, ತರಕಾರಿ, ಧಾನ್ಯಗಳು ಮತ್ತು ತೆಳ್ಳಗಿನ ಪ್ರೋಟೀನ್ ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವನೆ ಮಾಡಿ.

Pic credit - Pinterest

ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಇದರಿಂದ ಸ್ತನಗಳ ಆರೋಗ್ಯ ಚೆನ್ನಾಗಿರುತ್ತದೆ.

Pic credit - Pinterest

ಮೂಳೆಗಳು ಆರೋಗ್ಯವಾಗಿರಲು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸಿ.

Pic credit - Pinterest

ಆರೋಗ್ಯ ತಜ್ಞರು ಒದಗಿಸಿದ ಸಲಹೆಯಂತೆ ನಿಯಮಿತ ಮ್ಯಾಮೊಗ್ರಾಮ್ ಗಳು ಮತ್ತು ಕ್ಲಿನಿಕಲ್ ಸ್ತನ ಪರೀಕ್ಷೆಗಳನ್ನು ಮಾಡಿಕೊಳ್ಳಿ.

Pic credit - Pinterest

ಪ್ರತಿನಿತ್ಯ ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದಂತಹ  ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

Pic credit - Pinterest

ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನವಾಗಿದೆ. ಹಾಗಾಗಿ ವೈಯಕ್ತಿಕ ಸಲಹೆ ಪಡೆಯಲು ನಿಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

Pic credit - Pinterest