ಗರ್ಭಿಣಿಯರಿಗೆ ಕಾಡುವ ಹೊಟ್ಟೆ ತುರಿಕೆಗೆ ಇಲ್ಲಿದೆ ಸರಳ ಮನೆಮದ್ದು

09 July 2024

Pic credit - pinterest

Preity Bhatt

Pic credit - pinterest

ಗರ್ಭಾವಸ್ಥೆಯಲ್ಲಿ ಹೊಟ್ಟೆ ಮುಂದೆ ಬರುತ್ತಾ ಹೋದಂತೆ ಹೊಟ್ಟೆಯ ಮೇಲೆ ತುರಿಕೆ ಕಾಣಿಸಿಕೊಳ್ಳಲಾರಂಭಿಸುತ್ತದೆ.

Pic credit - pinterest

ಹೊಟ್ಟೆಯ ಮೇಲಿನ ಒತ್ತಡದಿಂದಾಗಿ ಈ ತುರಿಕೆ ಉಂಟಾಗಬಹುದು. ಇದರಿಂದ ಮಹಿಳೆಯರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. 

Pic credit - pinterest

ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಮೇಲೆ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ವಿವಿಧ ರೀತಿಯ ಔಷಧಿ ಬದಲಾಗಿ ಮನೆಮದ್ದುಗಳನ್ನು ಬಳಸಬಹುದು.

Pic credit - pinterest

ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಅಲೋವೆರಾ ಜೆಲ್ ನಿಮಗೆ ಈ ತುರಿಕೆಯಿಂದ ಮುಕ್ತಿ ನೀಡುತ್ತದೆ.

Pic credit - pinterest

ಈ ಮೂರರಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಅದನ್ನು ಹೊಟ್ಟೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.

Pic credit - pinterest

ಪ್ರತಿದಿನ ಸ್ನಾನವದ ಬಳಿಕ ಇದನ್ನು ಹೊಟ್ಟೆಯ ಸುತ್ತಲೂ ನಿಧಾನವಾಗಿ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಚರ್ಮವೂ ಮೃದುವಾಗುತ್ತದೆ. 

Pic credit - pinterest

ಈ ಕ್ರಮವನ್ನು ತಪ್ಪದೇ ಅನುಸರಿಸಿದಲ್ಲಿ ತುರಿಕೆ ನಿವಾರಣೆಯಾಗುತ್ತದೆ ಜೊತೆಗೆ ಕಲೆಗಳು ಸಹ ಮಾಯವಾಗುತ್ತದೆ.