ತೂಕ ಇಳಿಸಲು ವ್ಯಾಯಾಮ ಮಾತ್ರ ಪರಿಹಾರವಾ?

11 Dec 2023

Author: Sushma Chakre

ಕ್ಯಾಲೊರಿಗಳನ್ನು ಕಡಿಮೆ ಮಾಡಲು ಮತ್ತು ನಮ್ಮ ಸಂಪೂರ್ಣ ಆರೋಗ್ಯವನ್ನು ಸುಧಾರಿಸಲು ವ್ಯಾಯಾಮ ಮಾಡುವುದು ಅತ್ಯಗತ್ಯ. ಆದರೆ, ವ್ಯಾಯಾಮದಿಂದ ಮಾತ್ರ ತೂಕ ಇಳಿಸಲು ಸಾಧ್ಯವಾ? ಎಂಬ ಪ್ರಶ್ನೆ ನಿಮಗಿದ್ದರೆ ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ವ್ಯಾಯಾಮ ಮಾತ್ರ ಪರಿಹಾರವಲ್ಲ

ತೂಕ ಇಳಿಸಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆಹಾರದ ಬದಲಾವಣೆಗಳ ಮೂಲಕ  ವ್ಯಕ್ತಿಗಳು ತಮ್ಮ ತೂಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್ ಮತ್ತು ಧಾನ್ಯಗಳು ಸಮೃದ್ಧವಾಗಿರುವ ಆಹಾರವನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ.

ಆಹಾರ ಮತ್ತು ಕ್ಯಾಲೋರಿ ಕೊರತೆ

ನಮ್ಮ ಜೀವನಶೈಲಿಯ ಬದಲಾವಣೆಗಳು ವ್ಯಾಯಾಮವಿಲ್ಲದೆ ತೂಕ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಾಕಷ್ಟು ನಿದ್ರೆ ಮಾಡುವುದು ಮತ್ತು ಒತ್ತಡವನ್ನು ನಿರ್ವಹಿಸುವಂತಹ ಸರಳ ಮತ್ತು ಪ್ರಮುಖವಾದ ಆರೋಗ್ಯಕರ ಜೀವನಶೈಲಿಯ ಬದಲಾವಣೆಗಳು ತೂಕ ಇಳಿಸಲು ಸಹಾಯ ಮಾಡಬಹುದು.

ಜೀವನಶೈಲಿ ಬದಲಾವಣೆಗಳು

ವ್ಯಾಯಾಮ ಕೇಂದ್ರಿತ ತೂಕ ಇಳಿಸುವ ವಿಧಾನಗಳಿಗೆ ಮಧ್ಯಂತರ ಉಪವಾಸವು ಬಹಳ ಮುಖ್ಯ. ಮಧ್ಯಂತರ ಉಪವಾಸದಲ್ಲಿಯೂ ಸಹ, 16 ಗಂಟೆಗಳ ಉಪವಾಸ, 8 ಗಂಟೆಗಳ ತಿನ್ನುವ ವಿಧಾನ ಅಥವಾ ಒಂದು ದಿನ ಬಿಟ್ಟು ಮತ್ತೊಂದು ದಿನ ಉಪವಾಸದಂತಹ ವಿಭಿನ್ನ ವಿಧಾನಗಳು ಅಸ್ತಿತ್ವದಲ್ಲಿವೆ.

ಮಧ್ಯಂತರ ಉಪವಾಸ

ತೂಕ ಇಳಿಸಲು ವ್ಯಾಯಾಮಕ್ಕೆ ಮತ್ತೊಂದು ಪರ್ಯಾಯವೆಂದರೆ ದೈನಂದಿನ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು. ಲಿಫ್ಟ್​ ಮತ್ತು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಹತ್ತುವುದು, ಕುಳಿತುಕೊಳ್ಳುವ ಬದಲು ನಿಲ್ಲುವುದು, ಫೋನ್‌ನಲ್ಲಿರುವಾಗ ಹೆಜ್ಜೆ ಹಾಕುವುದು ಅಥವಾ ಮನೆಕೆಲಸಗಳನ್ನು ಮಾಡುವಂತಹ ಚಟುವಟಿಕೆಗಳನ್ನು ಮಾಡಬಹುದು.

ದಿನವಿಡೀ ಚಟುವಟಿಕೆಯಿಂದ ಇರುವುದು

ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗುವುದು ಮಾತ್ರವಲ್ಲ ನಮ್ಮ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಹಾಗೇ, ಎಲ್ಲ ಆಹಾರವೂ ಸುಲಭವಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಇದರಿಂದ ತೂಕವೂ ಕಡಿಮೆಯಾಗುತ್ತದೆ.

ಹೆಚ್ಚು ನೀರು ಕುಡಿಯುವುದು