ಅಜೀರ್ಣತೆ ಸಮಸ್ಯೆಗೆ ಈ ಮದ್ದು ಅಮೃತವಿದ್ದಂತೆ
9 August 2024
Pic credit - pinterest
Preeti Bhatt
ಕೆಲವರಿಗೆ ಊಟದ ನಂತರ ಹೊಟ್ಟೆ ಭಾರ ಅಥವಾ ಉಬ್ಬಿಕೊಂಡ ಅನುಭವವಾಗುತ್ತದೆ ಈ ರೀತಿಯ ಸಮಸ್ಯೆ ನಿವಾರಿಸಲು ಮಜ್ಜಿಗೆ ಉತ್ತಮವಾಗಿದೆ.
Pic credit - pinterest
ಮೊಸರಿಗಿಂತ ಮಜ್ಜಿಗೆ ಉತ್ತಮ. ಅದಕ್ಕಾಗಿಯೇ ಇದು ಅಮೃತಕ್ಕೆ ಸಮ ಎಂದು ಹೇಳಲಾಗುತ್ತದೆ.
Pic credit - pinterest
ಇದು ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ. ಊಟದ ನಂತರ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
Pic credit - pinterest
ಮಜ್ಜಿಗೆಗೆ, ಹುರಿದು ಕುಟ್ಟಿ ಪುಡಿ ಮಾಡಿದ ಜೀರಿಗೆ, ಒಂದು ಚಿಟಿಕೆ ಇಂಗನ್ನು ಸೇರಿಸಿ ಕುಡಿಯುವುದರಿಂದ ಗ್ಯಾಸ್ ಆಗುವುದಿಲ್ಲ.
Pic credit - pinterest
ಮೊಸರು, ನೀರು, ಜೀರಿಗೆ, ಮೆಣಸು ಹಾಗೂ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ನಿವಾರಣೆ ಆಗುತ್ತೆ.
Pic credit - pinterest
ಅಜೀರ್ಣವಾಗಿದ್ದರೆ ತ್ವರಿತ ಪರಿಹಾರಕ್ಕಾಗಿ ಒಂದು ಲೋಟ ಮಸಾಲೆ ಮಜ್ಜಿಗೆಯನ್ನು ಕುಡಿಯಿರಿ.
Pic credit - pinterest
ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಗಳು ಇಲ್ಲದವರು ಮಾತ್ರ ಇದನ್ನು ಸೇವನೆ ಮಾಡಿ. ಮತ್ತಿತರರು ವೈದ್ಯರ ಸಲಹೆ ಪಡೆಯಿರಿ.
Pic credit - pinterest
Next: ಈ ಆಹಾರ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಹೆಚ್ಚಿಸುತ್ತವೆ