ವೈದ್ಯರು ತಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳುತ್ತಾರೆ?

01 JULY 2024

Pic credit - Freepik

Author Name

ಶಾಂತ ಮನಸ್ಥಿತಿ

ಬೆಳಿಗ್ಗೆ ಏಳುವಾಗ ಶಾಂತ ಮನಸ್ಥಿತಿಯಲ್ಲಿ ಎದ್ದು, ಯಾವುದೇ ಗಡಿಬಿಡಿ ಮಾಡಿಕೊಳ್ಳದೆಯೇ ನಿಮ್ಮ ದಿನನಿತ್ಯದ ಕಾರ್ಯಗಳನ್ನು ಆರಂಭಿಸಿ.

ಯೋಗ, ವ್ಯಾಯಾಮ

ಯಾವುದಾದರೂ ಒಂದು ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ, ಯೋಗ, ವ್ಯಾಯಾಮ, ವಾಕಿಂಗ್ ನಿಮಗೆ ಯಾವುದು ಅನುಕೂಲವೋ ಅದನ್ನೇ ಮಾಡಿ. 

ಆರೋಗ್ಯಕರ ಆಹಾರ

ಬೆಳಿಗ್ಗೆ 8 ಗಂಟೆಯೊಳಗೆ ನಿಮ್ಮ ಉಪಹಾರ ಮುಗಿದಿರಲಿ. ಜೊತೆಗೆ ಉಪಹಾರ ಆರೋಗ್ಯಕ್ಕೆ ಪೂರಕವಾಗಿರಲಿ. ಅಂದರೆ ಬೆಳಿಗ್ಗೆ ಎಣ್ಣೆಯಲ್ಲಿ ಖರೀದ ಆಹಾರಗಳು, ಕಾರದ ಪದಾರ್ಥಗಳ ಬಳಕೆ ಮಾಡಬೇಡಿ

ನೀರು ಕುಡಿಯುವುದು ಒಳ್ಳೆಯದು

ಊಟ ಮಾಡುವ ಮೊದಲು ಯಾವುದೇ ರೀತಿಯ ಆಹಾರ ಸೇವನೆ ಮಾಡಬೇಡಿ. ನೀರು ಕುಡಿಯುವುದು ಒಳ್ಳೆಯದು. ಆದರೆ ಊಟ ಆದ ತಕ್ಷಣ ನೀರು ಕಡಿಯಬೇಡಿ.

ಉಪ್ಪು ಮತ್ತು ಸಕ್ಕರೆ

ನೀವು ಸೇವನೆ ಮಾಡುವ ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆಯ ಬಳಕೆ ಕಡಿಮೆ ಇರಲಿ.

ಚಿಕ್ಕ ನಡಿಗೆ

ಊಟವಾದ ಬಳಿಕ ಚಿಕ್ಕ ನಡಿಗೆ ಮಾಡುವುದನ್ನು ಮರೆಯಬೇಡಿ. ಕುಳಿತು ಕೆಲಸ ಮಾಡುವವರಾದರೆ ಒಂದು ಗಂಟೆಗೆ ಒಮ್ಮೆ ವಿರಾಮ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಊಟವಾದ ತಕ್ಷಣ ಮಲಗಬೇಡಿ.

ಚಹಾ ಅಥವಾ ಕಾಫಿ 

ದಿನದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಚಹಾ ಅಥವಾ ಕಾಫಿ ಕುಡಿಯಿರಿ. ಅದಕ್ಕಿಂತ ಹೆಚ್ಚು ಸೇವನೆ ಒಳ್ಳೆಯದಲ್ಲ.

ಮೊಬೈಲ್ ಬಳಕೆ ಮಾಡಬೇಡಿ

ರಾತ್ರಿಯ ಊಟ ಕಡಿಮೆ ಇರಲಿ. ಮಲಗುವ ಮುಂಚೆ ಪುಸ್ತಕ ಓದುವುದು ತುಂಬಾ ಒಳ್ಳೆಯದು. ಬೇಗ ನಿದ್ರೆ ಮಾಡಿ, ಬೇಗ ಏಳಿ. ರಾತ್ರಿ ಹೊತ್ತು ಮೊಬೈಲ್ ಬಳಕೆ ಮಾಡಬೇಡಿ.