ಬೆಳಿಗ್ಗೆ 1 ಕಪ್ ಈ ಪಾನೀಯ ಕುಡಿಯುವುದರಿಂದ ಅತಿಯಾಗಿ ಹಸಿವಾಗುವುದಿಲ್ಲ

11 Dec 2023

Author: Sushma Chakre

ತೂಕವನ್ನು ಇಳಿಸಿಕೊಳ್ಳುವುದು ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ತೊಂದರೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದಕ್ಕೆ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ.

ತೂಕ ಇಳಿಸಲು ಹೀಗೆ ಮಾಡಿ

ಬೆಳಗ್ಗೆ 1 ಕಪ್ ಬ್ಲಾಕ್ ಕಾಫಿ ಕುಡಿಯುವುದರಿಂದ ಅದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ, ಹಸಿವನ್ನು ನಿಗ್ರಹಿಸುತ್ತದೆ. ಸಮತೋಲಿತ ಜೀವನಶೈಲಿಯ ಭಾಗವಾಗಿರುವಾಗ ಬ್ಲಾಕ್ ಕಾಫಿಯನ್ನು ಮಿತವಾಗಿ ಕುಡಿಯುವುದು ತೂಕ ಇಳಿಸಲು ಸಹಕಾರಿಯಾಗಿದೆ.

ಈ ಬೆಳಗಿನ ಪಾನೀಯ ಟ್ರೈ ಮಾಡಿ

ಬ್ಲಾಕ್ ಕಾಫಿಯಲ್ಲಿರುವ ಕೆಫೀನ್ ನಮ್ಮ ಮೆದುಳನ್ನು ಆ್ಯಕ್ಟಿವ್ ಮಾಡುತ್ತದೆ. ಹೆಚ್ಚಿನ ಚಯಾಪಚಯ ಕ್ರಿಯೆಯು ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಚಯಾಪಚಯವನ್ನು ಹೆಚ್ಚಿಸುತ್ತದೆ

ಕೆಫೀನ್ ಅದರ ಹಸಿವು ನಿಗ್ರಹಿಸುವ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಬ್ಲಾಕ್ ಕಾಫಿಯನ್ನು ಕುಡಿಯುವುದರಿಂದ ಏನಾದರೂ ತಿನ್ನಬೇಕೆಂಬ ಕಡುಬಯಕೆಗಳನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಸಿವನ್ನು ನಿಗ್ರಹಿಸುತ್ತದೆ

ಬ್ಲಾಕ್ ಕಾಫಿಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಇದನ್ನು ಸಕ್ಕರೆ, ಹಾಲು ಅಥವಾ ಇತರ ಹೆಚ್ಚಿನ ಕ್ಯಾಲೋರಿ ಅಂಶಗಳಿಲ್ಲದೆ ಸೇವಿಸಲಾಗುತ್ತದೆ.

ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ

ವ್ಯಾಯಾಮಕ್ಕೂ ಮೊದಲು ಬ್ಲಾಕ್ ಕಾಫಿಯನ್ನು ಸೇವಿಸುವುದರಿಂದ ವ್ಯಾಯಾಮದ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.

ವ್ಯಾಯಾಮದ ಪರಿಣಾಮವನ್ನು ಹೆಚ್ಚಿಸುತ್ತದೆ

ಬ್ಲಾಕ್ ಕಾಫಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ