ಪ್ಯಾಕ್ ಮಾಡಿದ ಆಹಾರದಿಂದ ಜೀವಕ್ಕೇ ಅಪಾಯ ಉಂಟಾದೀತು ಎಚ್ಚರ

22 Nov 2023

ಅಲ್ಟ್ರಾ ಸಂಸ್ಕರಿತ ಆಹಾರಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳು ನಿಮ್ಮ ಜೀವನವನ್ನು ಸುಲಭಗೊಳಿಸಬಹುದು. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು ಆ ಆಹಾರಗಳ ಮೇಲೆ ಹೆಚ್ಚು ಅವಲಂಬಿತರಾಗಬಹುದು.

ರೆಡಿ ಟು ಈಟ್

ಈ ಅಲ್ಟ್ರಾ ಪ್ರೊಸೆಸ್ಡ್ ಆಹಾರಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಹೊಸ ಅಧ್ಯಯನವು ಈ ರೀತಿಯ ಪ್ಯಾಕ್ ಮಾಡಲಾದ ಆಹಾರದಿಂದ 3 ರೀತಿಯ ಕ್ಯಾನ್ಸರ್ ಬರಬಹುದು ಎಂದು ಎಚ್ಚರಿಸಿದೆ.

ಕ್ಯಾನ್ಸರ್​ ಬರಬಹುದು ಎಚ್ಚರ

ಎಲ್ಲಾ ಸಂಸ್ಕರಿಸಿದ ಆಹಾರಗಳು ಕೆಟ್ಟದ್ದಲ್ಲದಿದ್ದರೂ, ಅವುಗಳನ್ನು ಅತಿಯಾಗಿ ತಿನ್ನುವುದು ಬೊಜ್ಜು, ಹೃದಯ ಕಾಯಿಲೆಗಳು ಮತ್ತು ಟೈಪ್ -2 ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಎಲ್ಲ ಆಹಾರವೂ ಕೆಟ್ಟದಲ್ಲ

ಬ್ರಿಸ್ಟಲ್ ವಿಶ್ವವಿದ್ಯಾನಿಲಯ ಮತ್ತು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನ ಸಂಶೋಧಕರ ತಂಡವು ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಗಂಟಲು, ಬಾಯಿ ಮತ್ತು ಅನ್ನನಾಳ ಸೇರಿದಂತೆ ದೇಹದ ಮೇಲಿನ ಭಾಗದಲ್ಲಿ ಕ್ಯಾನ್ಸರ್ ಉಂಟಾಗುವ ಅಪಾಯವಿದೆ ಎಂದಿದೆ.

ಕ್ಯಾನ್ಸರ್​ಗೆ ಹೇಗೆ ಕಾರಣವಾಗುತ್ತೆ?

 ಈ ಆಹಾರಗಳಲ್ಲಿ ಸಂಸ್ಕರಿಸಿದ ಮಾಂಸ, ಸುವಾಸನೆಯುಕ್ತ ಮೊಸರು, ಚಿಪ್ಸ್, ಚಾಕೊಲೇಟ್​ಗಳು, ಐಸ್ ಕ್ರೀಮ್ ಹಾಗೂ ಕೋಲ್ಡ್​ ಡ್ರಿಂಕ್​ಗಳು ಸೇರಿವೆ. ಇವುಗಳನ್ನು ಅತಿಯಾಗಿ ಸೇವಿಸಬೇಡಿ.

ಯಾವ ಆಹಾರ ಅಪಾಯಕಾರಿ?

ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಶೇ. 10ರಷ್ಟು ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ನ ಅಪಾಯ ಶೇ. 23ರಷ್ಟು ಹೆಚ್ಚಿದೆ ಎಂದು ಕಂಡುಹಿಡಿದಿದೆ.

ಅಧ್ಯಯನದಲ್ಲಿ ಏನಿದೆ?

ದೇಹದ ಕೊಬ್ಬು ಹೆಚ್ಚಾಗುವುದು ಹಾಗೂ ಅಲ್ಟ್ರಾ-ಸಂಸ್ಕರಿಸಿದ ಆಹಾರಗಳ ಸೇವನೆಯಿಂದ ಕ್ಯಾನ್ಸರ್ ಅಪಾಯ ಕಡಿಮೆ. ಆದರೆ, ಎಮಲ್ಸಿಫೈಯರ್‌ಗಳು ಮತ್ತು ಕೃತಕ ಸಿಹಿಕಾರಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸಿಹಿಕಾರಕಗಳು ಅಪಾಯಕಾರಿ