Author: Sushma Chakre

ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಬಾಲಿವುಡ್ ಸೆಲೆಬ್ರಿಟಿಗಳಿವರು

ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಬಾಲಿವುಡ್ ಸೆಲೆಬ್ರಿಟಿಗಳಿವರು

02 Feb 2024

ಗರ್ಭಕಂಠದ ಕ್ಯಾನ್ಸರ್​ನಿಂದ ಇಂದು ಬಾಲಿವುಡ್ ನಟಿ ಪೂನಂ ಪಾಂಡೆ ಮೃತಪಟ್ಟಿದ್ದಾರೆ. ಅನಾರೋಗ್ಯವೆನ್ನುವುದು ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಸೂಪರ್​​ಸ್ಟಾರ್​ಗಳು, ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ಆದರೆ, ಕ್ಯಾನ್ಸರ್​ನಂತಹ ಮಾರಣಾಂತಿಕ ರೋಗ ಬಂದರೂ ಅದರ ವಿರುದ್ಧ ಹೋರಾಡಿ, ಉತ್ತಮ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿರುವ ಕೆಲವು ಬಾಲಿವುಡ್ ನಟ- ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ.

ಕ್ಯಾನ್ಸರ್ ಗೆದ್ದ ಸೆಲೆಬ್ರಿಟಿಗಳು

ಒಂದು ಕಾಲದಲ್ಲಿ ಬಾಲಿವುಡ್​ ಚಿತ್ರರಂಗವನ್ನು ಆಳಿದ್ದ ನಟಿ ಸೋನಾಲಿ ಬೇಂದ್ರೆ ಅವರು 2018ರಲ್ಲಿ ಮೆಟಾಸ್ಟಾಟಿಕ್ ಕ್ಯಾನ್ಸರ್​ಗೆ ತುತ್ತಾಗಿದ್ದರು. ಅಮೆರಿಕಾದಲ್ಲಿ ಕ್ಯಾನ್ಸರ್​ ಚಿಕಿತ್ಸೆ ಪಡೆದ ನಂತರ ಸೊನಾಲಿ ಬೇಂದ್ರೆ ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ.

ಸೋನಾಲಿ ಬೇಂದ್ರೆ

ಬಾಲಿವುಡ್​ನ ಖ್ಯಾತ ನಟ ಕೆಜಿಎಫ್​ ಖ್ಯಾತಿಯ ಸಂಜಯ್ ದತ್ ಅವರಿಗೆ 2020ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ತುರ್ತು ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಅವರು ಈಗ ಆರೋಗ್ಯಯುತವಾಗಿದ್ದಾರೆ.

ಸಂಜಯ್ ದತ್

ಪರ್ದೇಸ್, ಧಡ್ಕನ್, ಲಜ್ಜಾ ಮುಂತಾದ ಬಾಲಿವುಡ್ ಚಿತ್ರಗಳಲ್ಲಿನ ಪಾತ್ರಗಳಿಗೆ ಪ್ರಸಿದ್ಧರಾದ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್ ಉಂಟಾಗಿತ್ತು. ಅದೇ ಕಾರಣಕ್ಕಾಗಿ ಹಲವು ವರ್ಷಗಳಿಂದ ಅವರು ಸಿನಿಮಾ, ವೆಬ್​ ಸ್ಟೋರಿಗಳಲ್ಲಿ ನಟಿಸಲು ಬಂದ ಅವಕಾಶಗಳನ್ನು ತಿರಸ್ಕರಿಸುತ್ತಿದ್ದಾರೆ. ಈಗ ಅವರು ಚಿಕಿತ್ಸೆ ಪಡೆದು, ಗುಣಮುಖರಾಗುತ್ತಿದ್ದಾರೆ.

ಮಹಿಮಾ ಚೌಧರಿ

ಕೆಲವು ವರ್ಷಗಳ ಹಿಂದೆ ಹೃತಿಕ್ ರೋಷನ್ ತಮ್ಮ ತಂದೆ ಹಾಗೂ ಹಿರಿಯ ನಟ ರಾಕೇಶ್ ರೋಷನ್ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದರು. ರಾಕೇಶ್ ರೋಷನ್ ಅವರ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಇದ್ದುದರಿಂದ ಸೂಕ್ತ ಚಿಕಿತ್ಸೆ ನೀಡಿ ಅದನ್ನು ಗುಣಪಡಿಸಲಾಗಿತ್ತು.

ರಾಕೇಶ್ ರೋಶನ್

ದಿಲ್​ ಸೇ ಸಿನಿಮಾದ ಮೂಲಕ ಸಿನಿರಸಿಕರ ಮನ ಗೆದ್ದಿದ್ದ ನಟಿ ಮನಿಶಾ ಕೊಯಿರಾಲಾ ಅವರಿಗೆ 2012ರಲ್ಲಿ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕಿತ್ಸೆ ಮತ್ತು ಕೀಮೋಥೆರಪಿಗಾಗಿ ಅವರು ಅಮೆರಿಕಾಕ್ಕೆ ತೆರಳಿದರು. ಅವರೀಗ ಚೇತರಿಸಿಕೊಂಡಿದ್ದು, ಅಂದಿನಿಂದ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮನೀಶಾ ಕೊಯಿರಾಲಾ

ಬಾಲಿವುಡ್ ನಟಿ ಲೀಸಾ ರೇ ಅಪರೂಪದ ಮತ್ತು ಮಾರಣಾಂತಿಕ ರಕ್ತದ ಕಾಯಿಲೆಯಾದ ಮಲ್ಟಿಪಲ್ ಮೈಲೋಮಾಕ್ಕೆ ತುತ್ತಾಗಿದ್ದರು.  4 ತಿಂಗಳ ಕಾಲ ಕೀಮೋಥೆರಪಿಗೆ ಒಳಗಾದ ನಂತರ ಅವರು 2010ರಲ್ಲಿ ಕಾಂಡಕೋಶ ಕಸಿ ಮಾಡಿಸಿಕೊಂಡರು.

ಲೀಸಾ ರೇ

2004ರ ಗ್ಯಾಂಗ್‌ಸ್ಟರ್ ಚಿತ್ರೀಕರಣದ ಸಮಯದಲ್ಲಿ ಹೆಸರಾಂತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಹಾಗೂ ನಟ ಅನುರಾಗ್ ಬಸು ಅವರಿಗೆ ತೀವ್ರವಾದ ಪ್ರೋಮಿಲೋಸೈಟಿಕ್ ಲ್ಯುಕೇಮಿಯಾ ಉಂಟಾಗಿತ್ತು. ಇದು ಒಂದು ರೀತಿಯ ರಕ್ತದ ಕ್ಯಾನ್ಸರ್‌. ಇದೀಗ ಅವರು ಅದರಿಂದ ಚೇತರಿಸಿಕೊಂಡಿದ್ದಾರೆ.

ಅನುರಾಗ್ ಬಸು

ಬಾಲಿವುಡ್​ನ ಹಿರಿಯ ನಟಿ ಕಿರಣ್ ಖೇರ್ ಅವರಿಗೆ 2021ರಲ್ಲಿ ಮಲ್ಟಿಪಲ್ ಮೈಲೋಮಾ ಉಂಟಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆದ ನಂತರ ಅವರೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಸದ್ಯಕ್ಕೆ ಹಿಂದಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

ಕಿರಣ್ ಖೇರ್