Author: Sushma Chakre

ಹೆರಿಗೆ ಬಳಿಕ ಆಲಿಯಾ ಭಟ್ ತೂಕ ಇಳಿಸಿದ್ದು ಹೇಗೆ? 

ಹೆರಿಗೆ ಬಳಿಕ ಆಲಿಯಾ ಭಟ್ ತೂಕ ಇಳಿಸಿದ್ದು ಹೇಗೆ? 

19 ಜನವರಿ 2024

Author: Sushma Chakre

ಆಲಿಯಾ ಭಟ್ ಅವರಿಗೆ ಕೇಕ್ ಎಂದರೆ ಬಹಳ ಇಷ್ಟ. ಆದರೆ, ಅವರು ಬೇರೆ ಸಮಯದಲ್ಲಿ ತಮ್ಮ ಡಯೆಟ್​ನೊಂದಿಗೆ ರಾಜಿ ಮಾಡಇಕೊಳ್ಳುವುದಿಲ್ಲ. ಆಲಿಯಾ ಸಾಮಾನ್ಯವಾಗಿ ಸಾವಯವ ಮತ್ತು ಆರೋಗ್ಯಕರ ಆಹಾರವನ್ನು ತಿನ್ನುತ್ತಾರೆ.

ಸಾವಯವ ಮತ್ತು ಆರೋಗ್ಯಕರ ಆಹಾರ

ಆರೋಗ್ಯಕರ ಕೊಬ್ಬಿನಂಶವಿರುವ ಆಹಾರ, ಹಣ್ಣುಗಳು, ತರಕಾರಿಗಳು ಮತ್ತು ತಾಜಾ ಹಣ್ಣಿನ ಜ್ಯೂಸ್​ ಸೇವಿಸುವುದು ಆಲಿಯಾ ಅಭ್ಯಾಸ. ಅವರ ಡಯಟಿಷಿಯನ್ ಹೇಳಿದಂತೆ ಅವರು ಪ್ರೋಟೀನ್-ಭರಿತ ಆಹಾರವನ್ನು ತಿನ್ನಲು ಆದ್ಯತೆ ನೀಡುತ್ತಾರೆ.

ಪ್ರೋಟೀನ್ ಹೆಚ್ಚಾಗಿರುವ ಆಹಾರ

ಆಲಿಯಾ ಭಟ್ ತನ್ನ ಡಯಟ್ ಜೊತೆಗೆ ನಿಯಮಿತವಾಗಿ ವರ್ಕೌಟ್ ಮಾಡುತ್ತಾಳೆ. ಜಿಮ್‌ಗೆ ಹೋಗುವುದನ್ನು ಹೊರತುಪಡಿಸಿ ಅವರು ಪಿಲೇಟ್ಸ್‌ ಮಾಡುತ್ತಾರೆ. ಅದಕ್ಕೆಂದೇ ಅವರಿಗೆ ಟ್ರೈನರ್​ ಇದ್ದಾರೆ.

ವರ್ಕ್​ಔಟ್ ಹೀಗಿರುತ್ತದೆ

ಆಲಿಯಾ ದಿನಕ್ಕೆ 3 ಬಾರಿ ತಿಂಡಿ- ಊಟ ಸೇವಿಸುವ ಬದಲು 8 ಬಾರಿ ಊಟ ಮಾಡುತ್ತಾರೆ. ಆದರೆ, ಸ್ವಲ್ಪ ಸ್ವಲ್ಪ ಆಹಾರ ಮಾತ್ರ ಸೇವಿಸುತ್ತಾರೆ. ಇದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ.

ಪ್ರೋಟೀನ್ ಹೆಚ್ಚಾಗಿರುವ ಆಹಾರ

ಕ್ಯಾಲೋರಿ ಕಡಿಮೆ ಇರುವ ಆಹಾರಗಳೆಲ್ಲ ಆರೋಗ್ಯಕರವೆಂದು ಅರ್ಥವಲ್ಲ. ಹೀಗಾಗಿ ಕ್ಯಾಲೋರಿ ಕೌಂಟ್ ಬಗ್ಗೆ ಯೋಚನೆ ಮಾಡಬೇಡಿ. ಸೋಡಾವು 0 ಕ್ಯಾಲೋರಿಗಳನ್ನು ಹೊಂದಿದ್ದರೂ ಸಹ ಇದು ಆರೋಗ್ಯಕರ ಮತ್ತು ಪೌಷ್ಟಿಕವಾದ ಆಹಾರವಲ್ಲ. ಆರೋಗ್ಯಕರ ಆಹಾರ ಸೇವನೆಗೆ ಮಾತ್ರ ಆದ್ಯತೆ ನೀಡಿ.

ಕ್ಯಾಲೋರಿ ಬಗ್ಗೆ ಯೋಚಿಸಬೇಡಿ

ಡಿಟಾಕ್ಸ್ ಪಾನೀಯದೊಂದಿಗೆ ನಿಮ್ಮ ಬೆಳಿಗ್ಗೆಯನ್ನು ಪ್ರಾರಂಭಿಸಿ. ಏಕೆಂದರೆ ನಿರ್ವಿಶೀಕರಣವು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.

ಡಿಟಾಕ್ಸ್ ಡ್ರಿಂಕ್ ಸೇವಿಸಿ

ವೋಗ್‌ಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಭಟ್ ತಮ್ಮ ಮಗುವಿಗೆ ಜನ್ಮ ನೀಡಿದ ನಂತರ ತೂಕ ಇಳಿಸಿಕೊಳ್ಳಲು ಯಾವುದೇ ಅಸ್ವಾಭಾವಿಕ ಮಾರ್ಗಗಳನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ. ವಾರದಲ್ಲಿ ಐದಾರು ದಿನ ವರ್ಕ್ ಔಟ್ ಮಾಡಿ ಆರೋಗ್ಯಕರವಾದ ಆಹಾರ ಸೇವಿಸುತ್ತಿದ್ದೆ. ನಾನು ಪ್ರೆಗ್ನೆಂಟ್ ಆಗಿದ್ದಾಗಲೂ ಇದೇ ಅಭ್ಯಾಸವನ್ನು ರೂಢಿಸಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.

ಹೆರಿಗೆಯ ನಂತರ ತೂಕ ಇಳಿಸುವುದು ಹೇಗೆ?