31 July 2024
Pic credit - Pintrest
Author : Akshatha Vorkady
ಆವಕಾಡೋದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವಿನಂತಹ ಅನೇಕ ಪೋಷಕಾಂಶ ಸಮೃದ್ಧವಾಗಿವೆ.
Pic credit - Pintrest
ಆವಕಾಡೋದಲ್ಲಿರುವ ಆರೋಗ್ಯಕರ ಕೊಬ್ಬು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುವುದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಬಹುದು.
Pic credit - Pintrest
ಮಧುಮೇಹಿಗಳು ಆವಕಾಡೊ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ.
Pic credit - Pintrest
ಆವಕಾಡೊಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ನಿಯಮಿತ ಬಳಕೆಯು ನಿಮ್ಮ ಮೂಳೆ ಬಲಪಡಿಸುತ್ತದೆ. ಕೀಲು ನೋವು, ಊತ ಮತ್ತು ಉರಿಯೂತ ನಿವಾರಿಸುತ್ತದೆ.
Pic credit - Pintrest
ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಮಸುಕಾಗಲು ಪ್ರಾರಂಭವಾಗಿದ್ರೆ ಆವಕಾಡೊ ಸೇವಿಸೋದು ಪರಿಣಾಮಕಾರಿ. ಇದು ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿಯಾಗಿದೆ.
Pic credit - Pintrest
ಆವಕಾಡೊ ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯರಕ್ತನಾಳದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.
Pic credit - Pintrest
ಆವಕಾಡೊಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ, ಮಲಬದ್ಧತೆ ನಿಯಂತ್ರಿಸಬಹುದು. ಜೀರ್ಣಾಂಗವ್ಯೂಹದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Pic credit - Pintrest