8 March 2025
Pic credit - Pintrest
Preethi Bhat
ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಸಾಮರ್ಥ್ಯ ವೃದ್ಧಿಸಲು ಈ ಹಣ್ಣನ್ನು ತಿನ್ನಿ
ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಕಿವಿ ಹಣ್ಣು ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ರೋಗಗಳಿಂದ ದೂರವಿರಿಸುತ್ತದೆ.
Pic credit - Pintrest
ಕಿವಿ ಹಣ್ಣು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Pic credit - Pintrest
ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಮಲಬದ್ಧತೆಯನ್ನು ಸರಾಗಗೊಳಿಸುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
Pic credit - Pintrest
ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಬೆನ್ನುಮೂಳೆಯ ಬೆಳವಣಿಗೆಗೆ ಈ ಹಣ್ಣಿನ ಸೇವನೆ ಮಾಡಬೇಕು.
Pic credit - Pintrest
ಕಿವಿ ಹಣ್ಣಿನ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
Pic credit - Pintrest
ಗರ್ಭಾವಸ್ಥೆಯಲ್ಲಿ ಈ ಹಣ್ಣಿನ ಸೇವನೆ ತಾಯಿ ಮತ್ತು ಮಗು ಇಬ್ಬರಿಗೂ ರುಚಿಕರವಾದ ಮತ್ತು ಆರೋಗ್ಯಕರ ಆಯ್ಕೆಯಾಗಿದೆ.
Pic credit - Pintrest
ಪ್ರತಿನಿತ್ಯ ಕಿವಿ ಹಣ್ಣಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನ ಸಿಗುತ್ತದೆ ಆದರೆ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.
Pic credit - Pintrest
ವ್ಯಾಪಾರ ಸ್ಥಳದಲ್ಲಿ ಅನುಸರಿಸಲೇ ಬೇಕಾದ ವಾಸ್ತು ನಿಯಮಗಳು
ಇದನ್ನೂ ಓದಿ