ಇತರರಿಂದ ಪ್ರತ್ಯೇಕವಾಗಿರಬೇಡಿ. ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಬೆಂಬಲವು ಬಹಳ ಮುಖ್ಯ. ಇದು ಕೇವಲ ಒಂದು ಸಣ್ಣ ಸಂಭಾಷಣೆ ಅಥವಾ ವಿಹಾರಕ್ಕೆ ಹೋಗುವುದಾಗಿರಬಹುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದಾಗಿರಬಹುದು. ಒಂಟಿಯಾಗಿರಬೇಡಿ.
ಪ್ರತ್ಯೇಕತೆ
ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ. ನಿಮ್ಮಷ್ಟಕ್ಕೆ ನೀವೇ ಕೊರಗುವುದರ ಬದಲು ನಿಮ್ಮ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಿ.
ನಿಮ್ಮ ಬಗ್ಗೆ ನೆಗೆಟಿವ್ ಮಾತು
ನಿದ್ರಾಹೀನತೆ ನಿಮ್ಮ ಮನಸ್ಥಿತಿಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಖಿನ್ನತೆಯನ್ನು ಉಲ್ಬಣಗೊಳಿಸುತ್ತದೆ. ದಿನಕ್ಕೆ 7ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿ.
ನಿದ್ರೆಯ ಕೊರತೆ
ಅನಾರೋಗ್ಯಕರವಾದ ಆಹಾರ ಪದ್ಧತಿ ನಿಮ್ಮ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಸಾಕಷ್ಟು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್ಗಳು ಮತ್ತು ಧಾನ್ಯಗಳೊಂದಿಗೆ ಸಮತೋಲಿತ ಆಹಾರ ಸೇವಿಸಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಕೆಫೀನ್ ಅನ್ನು ಮಿತಿಗೊಳಿಸಿ.
ಅನಾರೋಗ್ಯಕರ ಆಹಾರ ಪದ್ಧತಿ
ಮಾದಕ ವ್ಯಸನವು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಅತಿಯಾದ ಮದ್ಯಪಾನ ಮಾಡಬೇಡಿ.
ಅತಿಯಾದ ಮದ್ಯಪಾನ
ನಿಯಮಿತ ದೈಹಿಕ ಚಟುವಟಿಕೆಯು ಸುಧಾರಿತ ಮನಸ್ಥಿತಿ ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಸ್ವಲ್ಪವಾದರೂ ವಾಕಿಂಗ್ ಮಾಡುವ ಅಥವಾ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ.
ವ್ಯಾಯಾಮದ ಕೊರತೆ
ಟಿವಿ, ಮೊಬೈಲ್ ಅನ್ನು ಹೆಚ್ಚಾಗಿ ವೀಕ್ಷಿಸುವುದರಿಂದ ಅದರಲ್ಲಿ ಬರುವ ನೆಗೆಟಿವ್ ಅಂಶಗಳು ನಿಮ್ಮ ಮನಸಿನ ಮೇಲೆ ಇನ್ನಷ್ಟು ಪರಿಣಾಮ ಬೀರಬಹುದು. ಇದು ಒಂಟಿತನದ ಭಾವನೆಗಳಿಗೆ ಕಾರಣವಾಗಬಹುದು.