ಆಯಾಸ ಆದಾಗ ದೇಹಕ್ಕೆ ಶಕ್ತಿ ನೀಡುತ್ತೆ ಎಲೆಕ್ಟ್ರೋಲೈಟ್ ಅಂಶವಿರುವ ಈ ಆಹಾರಗಳು
05 October 2024
Pic credit - Pinterest
Sainanda
ದೇಹವು ಆರೋಗ್ಯವಾಗಿರಲು ಹಾಗೂ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ನೈಸರ್ಗಿಕ ರೂಪದ ಎಲೆಕ್ಟ್ರೋಲೈಟ್ ಮತ್ತು ಇನ್ನಿತರ ಪೌಷ್ಟಿಕಾಂಶಗಳು ದೇಹಕ್ಕೆ ಅಗತ್ಯವಾಗಿ ಬೇಕು.
Pic credit - Pinterest
ಆರೋಗ್ಯವನ್ನು ಸಮತೋಲನಗೊಳಿಸುವ ಎಲೆಕ್ಟ್ರೋಲೈಟ್ ಪ್ರಮಾಣವು ಹೆಚ್ಚಿರುವ ಈ ಕೆಲವು ಆಹಾರಗಳನ್ನು ಸೇವಿಸುವುದು ಅಗತ್ಯ.
Pic credit - Pinterest
ಮೊಸರು ಪ್ರೀಬಯೋಟಿಕ್ ಆಹಾರವಾಗಿದ್ದು, ಕರುಳು ಹಾಗೂ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
Pic credit - Pinterest
ಆಲೂಗಡ್ಡೆಯು ಪೊಟ್ಯಾಸಿಯಮ್ ಭರಿತ ಆಹಾರವಾಗಿದ್ದು ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Pic credit - Pinterest
ನಿಂಬೆ ರಸವು ಪೊಟ್ಯಾಸಿಯಮ್ ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾಗಿದ್ದು, ಸ್ನಾಯು ಮತ್ತು ನರಗಳ ಕಾರ್ಯಗಳನ್ನು ನಿಯಂತ್ರಿಸುತ್ತದೆ.
Pic credit - Pinterest
ಬಾಳೆಹಣ್ಣು ಪೊಟ್ಯಾಸಿಯಮ್ ನ ಅತ್ಯುತ್ತಮ ಮೂಲವಾಗಿದ್ದು, ಇದು ಹೃದಯ, ಮೂತ್ರಪಿಂಡಗಳು ಮತ್ತು ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ.
Pic credit - Pinterest
ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ ಮತ್ತು ಸೋಡಿಯಂ ಅಂಶಗಳು ಹೇರಳವಾಗಿದ್ದು, ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.
Pic credit - Pinterest
ನೀತಾ ಅಂಬಾನಿ ಸೌಂದರ್ಯ ರಹಸ್ಯವೇ ಈ ಜ್ಯೂಸ್
ಇಲ್ಲಿ ಕ್ಲಿಕ್ ಮಾಡಿ