Author: Sushma Chakre

ಹುಣಸೆಹಣ್ಣನ್ನು ಅತಿಯಾಗಿ ತಿಂದರೆ ಏನಾಗುತ್ತದೆ?

ಹುಣಸೆಹಣ್ಣನ್ನು ಅತಿಯಾಗಿ ತಿಂದರೆ ಏನಾಗುತ್ತದೆ?

04 ಜನವರಿ 2024

Author: Sushma Chakre

ಹುಣಸೆಹಣ್ಣು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಹುಣಸೆಯಲ್ಲಿ ವಿಶೇಷವಾಗಿ ವಿಟಮಿನ್ ಸಿ, ಫ್ಲೇವನಾಯ್ಡ್​, ಕ್ಯಾರೋಟಿನ್​, ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದೆ. 

ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ, ಅತಿಯಾದ ಹುಣಸೆಹಣ್ಣಿನ ಬಳಕೆಯು ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು.

ದಿನಕ್ಕೆ ಸುಮಾರು 10 ಗ್ರಾಂ ಹುಣಸೆಹಣ್ಣು ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ. ಹುಣಸೆಹಣ್ಣನ್ನು ಅತಿಯಾಗಿ ಸೇವಿಸಿದರೆ ಆರೋಗ್ಯದ ಮೇಲೆ ಏನೆಲ್ಲ ದುಷ್ಪರಿಣಾಮಗಳು ಉಂಟಾಗುತ್ತವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹುಣಸೆ ಹಣ್ಣಿನ ಅತಿಯಾದ ಸೇವನೆ ಹಲ್ಲಿನ ಒಸಡಿಗೆ ಹಾನಿ ಉಂಟುಮಾಡಬಹುದು. ಹುಣಸೆಹಣ್ಣು ಹೆಚ್ಚು ಹುಳಿ ಅಂಶವನ್ನು ಹೊಂದಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ಹಲ್ಲಿನ ಹಾನಿಯನ್ನು ಉಂಟುಮಾಡಬಹುದು. ನೀವು ಹೆಚ್ಚು ಹುಣಸೆಹಣ್ಣು ಸೇವಿಸಿದರೆ ಹಲ್ಲಿನ ಒಸಡಿನಲ್ಲಿರುವ ಆಮ್ಲದ ಅಂಶವು ಹೆಚ್ಚಾಗುತ್ತದೆ.

ಹುಣಸೆಹಣ್ಣಿನ ಸಾಮಾನ್ಯ ನ್ಯೂನತೆಗಳಲ್ಲಿ ಒಂದೆಂದರೆ ಅಲರ್ಜಿ. ಅನೇಕರು ಹುಣಸೆಹಣ್ಣನ್ನು ಆಹಾರದಲ್ಲಿ ಸೇರಿಸಿಕೊಂಡು ಸೇವಿಸುವ ಬದಲು ನೇರವಾಗಿ ತಿನ್ನಲು ಬಯಸುತ್ತಾರೆ. ಆದರೆ ಇದು ರಿಂಗ್ವರ್ಮ್, ತುರಿಕೆ, ಊತ, ತಲೆತಿರುಗುವಿಕೆ, ಮೂರ್ಛೆ, ವಾಂತಿ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

ಹುಣಸೆಹಣ್ಣು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುವ ಹಣ್ಣು. ತಿನ್ನುವಾಗ ಇದು ಹೊಟ್ಟೆ ಮತ್ತು ಜಠರಗರುಳಿನ ಪ್ರದೇಶದಲ್ಲಿ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ‘ಆಸಿಡ್ ರಿಫ್ಲಕ್ಸ್’ ನಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತದೆ.

ನೀವು ಯಾವುದಾದರೂ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಹುಣಸೆಹಣ್ಣು ತಿನ್ನುವುದನ್ನು ನಿಲ್ಲಿಸಬೇಕು. ಇದರ ಅತಿಯಾದ ಸೇವನೆಯು ರಕ್ತ ಕಣಗಳು ಕುಗ್ಗಲು ಕಾರಣವಾಗಬಹುದು. ಹುಣಸೆ ಹಣ್ಣಿನ ತಿರುಳು ವಿರೇಚಕ ಗುಣಗಳನ್ನು ಹೊಂದಿದೆ. ನೀವು ಔಷಧಿ ಸೇವಿಸುತ್ತಿದ್ದರೆ, ಹುಣಸೆಹಣ್ಣು ತಿನ್ನುವುದನ್ನು ನಿಲ್ಲಿಸಿ.

ಹುಣಸೆಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಈಗಾಗಲೇ ಮಧುಮೇಹದ ಔಷಧಿಯನ್ನು ತೆಗೆದುಕೊಳ್ಳುತ್ತಿರುವವರು ಹುಣಸೆಹಣ್ಣನ್ನು ತ್ಯಜಿಸಬೇಕು.