04-12-2023

ನಿಮ್ಮ ಮಗುವಿನ ಹಸಿವನ್ನು ಹೆಚ್ಚಿಸಲು ಏನು ಮಾಡಬೇಕು?

Author:Preeti Bhat Gunavanthe

ಪೌಷ್ಟಿಕ ಆಹಾರ

ಮಗುವಿನ ಹಸಿವನ್ನು ನೀಗಿಸಲು, ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ನೀಡಿ.

ವೇಳಾಪಟ್ಟಿ

ನಿಮ್ಮ ಮಗುವಿನ ಬೆಳಗಿನ ಉಪಾಹಾರ ಮತ್ತು ಊಟಕ್ಕೆ, ಸ್ಥಿರವಾದ ಒಂದು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಿ. 

ಒತ್ತಡ ಮುಕ್ತ

ಊಟದ ಸಮಯವನ್ನು ಆನಂದಿಸಲು ಮಕ್ಕಳಿಗೆ ಹೇಳಿ ಕೊಡಿ. ಇದರಿಂದ ಮಗು ಒತ್ತಡ ಮುಕ್ತವಾಗುತ್ತದೆ.

 ಅನುಕರಣೆ 

ಮಕ್ಕಳು ಹೆಚ್ಚಾಗಿ ಹೆತ್ತವರ ಆಹಾರ ಪದ್ಧತಿಯನ್ನು ಅನುಕರಿಸುತ್ತಾರೆ ಹಾಗಾಗಿ ನೀವು ಊಟವನ್ನು ಎಂದಿಗೂ ತಪ್ಪಿಸಬೇಡಿ.

ಟಿವಿ ಮತ್ತು ಮೊಬೈಲ್

ಟಿವಿ ಮತ್ತು ಮೊಬೈಲ್ ನೋಡುತ್ತಾ ಊಟ ತಿಂಡಿ ತಿನ್ನುವ ಅಭ್ಯಾಸವನ್ನು ತಪ್ಪಿಸಿ. 

ಅತಿಯಾಗಿ ತಿಂಡಿ ತಿನ್ನುವುದು 

ಮಕ್ಕಳು ಮಧ್ಯಂತರದ ಸಮಯದಲ್ಲಿ ಅತಿಯಾಗಿ ತಿಂಡಿ ತಿನ್ನುವುದನ್ನು ತಪ್ಪಿಸಿ. 

ಆಹಾರ ತಯಾರಿಕೆ

ಆಹಾರ ತಯಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ, ಇದರಿಂದ ಅವರಿಗೂ ಆಸಕ್ತಿ ಹುಟ್ಟುತ್ತದೆ. 

ಮಕ್ಕಳ ಇಷ್ಟಾನಿಷ್ಟ

ಆಹಾರದ ವಿಷಯಕ್ಕೆ ಬಂದಾಗ ಮಕ್ಕಳ ಇಷ್ಟಾನಿಷ್ಟಗಳನ್ನು ಗೌರವಿಸಿ.