Author: Sushma Chakre

ಲಿವರ್ ಆರೋಗ್ಯವಾಗಿರಲು ಮೂಲಂಗಿ ತಿನ್ನಿ

19 Dec 2023

Author: Sushma Chakre

ಮೂಲಂಗಿ ಚಳಿಗಾಲದ ಆರೋಗ್ಯಕರ ಆಹಾರವಾಗಿದೆ. ಮೂಲಂಗಿಯನ್ನು ಕ್ಯಾರೆಟ್, ಸೌತೆಕಾಯಿ, ಟೊಮ್ಯಾಟೋ ಜೊತೆ ಸಲಾಡ್‌ನಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಕೊಂಚ ವಾಸನೆಯ ತರಕಾರಿಯಾದರೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.

ಆರೋಗ್ಯ ರಕ್ಷಣೆ

ಲಿವರ್​​ನ ಆರೋಗ್ಯವನ್ನು ಕಾಪಾಡಲು, ಕಾಮಾಲೆ ಅಥವಾ ಟೈಫಾಯಿಡ್‌ನಂತಹ ಪಿತ್ತಜನಕಾಂಗದ ಕಾಯಿಲೆಗಳಿಂದ ಬೇಗ ಚೇತರಿಸಿಕೊಳ್ಳಲು ಬಯಸಿದರೆ ಮೂಲಂಗಿ ಸೇವನೆ ಮಾಡಿ.

ಲಿವರ್​ನ ಆರೋಗ್ಯಕ್ಕೆ ಸಹಕಾರಿ

ಮೂಲಂಗಿಯಲ್ಲಿ ವಿಟಮಿನ್ ಸಿ ಇರುತ್ತದೆ. ಮೂಲಂಗಿಯನ್ನು ಜ್ಯೂಸ್, ಸೂಪ್ ಅಥವಾ ತರಕಾರಿ, ಸಲಾಡ್ ರೂಪದಲ್ಲಿ ಸೇವಿಸಬಹುದು. ಯಕೃತ್ತಿನ ಜೀವಕೋಶಗಳನ್ನು ರಕ್ಷಿಸಲು ಮತ್ತು ಯಕೃತ್ತಿನ ಜೀವಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸಲು ಮೂಲಂಗಿ ಸಹಾಯಕವಾಗಿದೆ.

ಜೀವಕೋಶಗಳ ಮರುಉತ್ಪಾದನೆ

ಮೂಲಂಗಿಯು ಕ್ಯಾಲೋರಿ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಂಗಿ ಯಕೃತ್ತಿನ ಆರೋಗ್ಯಕ್ಕೆ ಮುಖ್ಯವಾಗಿದೆ ಮತ್ತು ತೂಕ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾಲೋರಿ ನಿಯಂತ್ರಣ

ಮೂಲಂಗಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ. ಮೂಲಂಗಿಯು ಜೀವಸತ್ವಗಳು, ಕಬ್ಬಿಣ ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

ನೀರಿನಂಶದಿಂದ ಕೂಡಿದೆ

ಮೂಲಂಗಿ ಅತ್ಯಂತ ಪೌಷ್ಟಿಕವಾದ ತರಕಾರಿಯಾಗಿದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿದೆ. ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಪೌಷ್ಟಿಕಾಂಶದ ತರಕಾರಿ

ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೂಲಂಗಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ ಮತ್ತು ಒತ್ತಡದ ವಿರುದ್ಧ ಹೋರಾಡುತ್ತವೆ.

ಉರಿಯೂತ ನಿವಾರಕ

ಮೂಲಂಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ನಿಮ್ಮ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ ಮೂಲಂಗಿ ಸೇವಿಸಿ.

ಸಕ್ಕರೆ ಮಟ್ಟದ ನಿಯಂತ್ರಣ