ನಿಫಾ ವೈರಸ್ ಹೇಗೆ ಹರಡುತ್ತೆ? ರೋಗ ಲಕ್ಷಣಗಳೇನು?

13 Sep 2023

ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಈ ನಿಫಾ ವೈರಸ್ ಒಂದು ಝೂನೋಟಿಕ್ ವೈರಸ್ ಆಗಿದೆ.

ಕೇರಳದಲ್ಲಿ ನಿಫಾ ಆರ್ಭಟ

ಬೈನ್ ಫಾಗ್ ಎಂದರೇನು? ಅದರಿಂದ ಹೊರಬರುವ ಮಾರ್ಗಗಳನ್ನು ತಿಳಿಯಿರಿ

ನಿಫಾ ವೈರಸ್​ನಿಂದ ತೀವ್ರವಾದ ಉಸಿರಾಟ ಮತ್ತು ನರವೈಜ್ಞಾನಿಕ ಕಾಯಿಲೆ ಬರುತ್ತದೆ. ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ.

ತೀವ್ರವಾದ ಉಸಿರಾಟ ಸಮಸ್ಯೆ

ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಾಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಮನುಷ್ಯರಿಗೆ ಹರಡುತ್ತದೆ. 

ನಿಫಾ ಹರಡುವುದೇಗೆ?

ನಿಫಾ ವೈರಸ್​ಗೆ ಯಾವುದೇ ನಿರ್ದಿಷ್ಟ, ನಿಖರವಾದ ಔಷಧಿಯೂ ಇಲ್ಲ. ಕೊರೊನಾ ವೈರಸ್​ಗಿಂತ ನಿಫಾ ವೈರಸ್ ಅತಿ ಅಪಾಯಕಾರಿ. 

ನಿಖರವಾದ ಔಷಧಿ ಇಲ್ಲ

ನಿಫಾ ವೈರಸ್ ಬಾವಲಿಗಳಿಂದ ಹುಟ್ಟಿಕೊಂಡು ಮನುಷ್ಯರಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ ಹಂದಿ, ನಾಯಿ, ಕುದುರೆಗಳಿಗೂ ಹರಡುತ್ತದೆ. ಆದರೆ, ಮನುಷ್ಯರಿಗೆ ಹರಡಿದರೆ ಅದು ತೀರಾ ಅಪಾಯಕಾರಿಯಾಗಿರುತ್ತದೆ.

ನಿಫಾ ಹರಡುವುದೇಗೆ?

ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ.

ನಿಫಾ ವೈರಸ್​ ಲಕ್ಷಣಗಳು

ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. 

ನಿಫಾ ವೈರಸ್ಬಾವಲಿ ತಿಂದ ಅರ್ಧಂಬರ್ಧ ಹಣ್ಣು ಲಕ್ಷಣಗಳು