IND vs SL: ಮೀಸಲು ದಿನವೂ ಫೈನಲ್ ಪಂದ್ಯ ನಡೆಯದಿದ್ದರೆ?

17-09-2023

ಏಷ್ಯಾಕಪ್ 2023 ಫೈನಲ್ ಪಂದ್ಯ ಇಂದು ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ದಸುನ್ ಶನಕಾ ನೇತೃತ್ವದ ಶ್ರೀಲಂಕಾ ಮುಖಾಮುಖಿ ಆಗಲಿದೆ.

ಏಷ್ಯಾಕಪ್ ಫೈನಲ್

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆ ಎನ್ನಲಾಗಿದೆ.

ಮಳೆಯ ಕಾಟ

ಒಂದು ವೇಳೆ ಫೈನಲ್​ಗೆ ಮಳೆ ಬಂದು ಪಂದ್ಯ ನಡೆಸಲು ಅಥವಾ ಮುಂದುವರೆಸಲು ಸಾಧ್ಯವಾಗದಿದ್ದರೆ ಸೋಮವಾರ ಮೀಸಲು ದಿನವನ್ನು ಇಡಲಾಗಿದೆ.

ಮೀಸಲು ದಿನ

ಮೀಸಲು ದಿನದಂದು ಸೋಮವಾರ ಕೂಡ ಕೊಲಂಬೊದಲ್ಲಿ ಶೇ.70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾದಾಗ ಟ್ರೋಫಿ ಯಾರಿಗೆ ನೀಡಲಾಗುತ್ತೆ?.

ಮೀಸಲು ದಿನವೂ ಮಳೆ

ಮೀಸಲು ದಿನ ಕೂಡ ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಭಾರತ ಮತ್ತು ಶ್ರೀಲಂಕಾ ನಡುವೆ ಟ್ರೋಫಿಯನ್ನು ಹಂಚಿಕೊಳ್ಳಲಾಗುತ್ತದೆ.

ಟ್ರೋಫಿ ಯಾರಿಗೆ?

ಅಂಪೈರ್​ಗಳು ಸಾಧ್ಯವಾದಷ್ಟು ಪಂದ್ಯ ನಡೆಸಲು ಪ್ರಯತ್ನಿಸುತ್ತಾರೆ. ಕನಿಷ್ಠ 20 ಓವರ್​ಗಳ ಪಂದ್ಯವನ್ನು ಕೂಡ ಆಡಲು ಸಾಧ್ಯವಾಗದಿದ್ದರೆ ರದ್ದು ಮಾಡಲಾಗುತ್ತದೆ.

20 ಓವರ್ ಪಂದ್ಯ

ಇಂದು ಪಂದ್ಯ ಆರಂಭಕ್ಕೆ ಮಳೆಯ ಕಾಟ ಇಲ್ಲ. ಆದರೆ, ಪಂದ್ಯ ಶುರುವಾಗಿ ಸಂಜೆಯ ವೇಳೆಗೆ ಜೋರು ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಸಂಜೆ ಮಳೆ

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಯಾವಾಗ?, ಎಷ್ಟು ಗಂಟೆಗೆ?