IND vs AUS ODI (1)

17-09-2023

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಯಾವಾಗ?, ಎಷ್ಟು ಗಂಟೆಗೆ?

IND vs SL

ಏಷ್ಯಾಕಪ್ ಫೈನಲ್

ಭಾರತ ಕ್ರಿಕೆಟ್ ತಂಡ ಸದ್ಯ ಏಷ್ಯಾಕಪ್ 2023 ಫೈನಲ್ ಆಡಲು ತಯಾರಾಗಿದೆ. ಇಂದು ಶ್ರೀಲಂಕಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

IND vs AUS ODI (7)

ಭಾರತ-ಆಸ್ಟ್ರೇಲಿಯಾ

ಏಷ್ಯಾಕಪ್ ಮುಗಿದ ಬಳಿಕ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

IND vs AUS ODI (6)

ಯಾವಾಗ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಸೆಪ್ಟೆಂಬರ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ.

ಉಳಿದ ಪಂದ್ಯ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಮತ್ತು ಕೊನೆಯ ಪಂದ್ಯ ಕ್ರಮವಾಗಿ ಸೆ. 24 (ಇಂದೋರ್), ಸೆ. 27 (ರಾಜ್ಕೋಟ್) ರಂದು ಆಯೋಜಿಸಲಾಗಿದೆ.

ಎಷ್ಟು ಗಂಟೆಗೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ.

ನೇರಪ್ರಸಾರ?

ಈ ಸರಣಿಯ ನೇರಪ್ರಸಾರ ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ಇರಲಿದೆ. ಜೊತೆಗೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.

ಭಾರತ ತಂಡ ಪ್ರಕಟ?

ಆಸೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಇನ್ನಷ್ಟೆ ಪ್ರಕಟವಾಗಬೇಕಿದೆ. ಏಷ್ಯಾಕಪ್ ಮುಗಿದ ಬಳಿಕ ಬಿಸಿಸಿಐ ತಂಡವನ್ನು ಹೆಸರಿಸಲಿದೆ.

ಇಂದು 250ನೇ ODI ಪಂದ್ಯ: ದಾಖಲೆ ಸೃಷ್ಟಿಸುವತ್ತ ರೋಹಿತ್ ಶರ್ಮಾ