26-09-2023

IND vs AUS: 3ನೇ ಏಕದಿನದಿಂದ ಭಾರತದ 7 ಆಟಗಾರರು ಔಟ್

ಇಂಡೋ-ಆಸೀಸ್

ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.

7 ಪ್ಲೇಯರ್ಸ್ ಔಟ್

3ನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದ 7 ಆಟಗಾರರು ಅಲಭ್ಯರಾಗಿದ್ದಾರೆ. ಕೆಲವರಿಗೆ ವಿಶ್ರಾಂತಿ ನೀಡಿದರೆ, ಇನ್ನೂ ಕೆಲವರು ಇಂಜುರಿಗೆ ತುತ್ತಾಗಿದ್ದಾರೆ.

ಶುಭ್​ಮನ್ ಗಿಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಿಂದ ಸ್ಟಾರ್ ಆರಂಭಿಕ ಬ್ಯಾಟರ್ ಗಿಲ್​ಗೆ ವಿಶ್ರಾಂತಿ ನೀಡಲಾಗಿದೆ.

ರುತುರಾಜ್ ಗಾಯಕ್ವಾಡ್

ಗಾಯಕ್ವಾಡ್ ಅವರನ್ನು ಆಸೀಸ್ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಆಯ್ಕೆ ಮಾಡಲಾಗಿದೆ. ಇವರು ಏಷ್ಯನ್ ಗೇಮ್ಸ್​ಗೆ ತೆರಳಲಿದ್ದಾರೆ.

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದು, ಇದೀಗ ಗಿಲ್ ಜೊತೆ ಇವರಿಗೂ ವಿಶ್ರಾಂತಿ ನೀಡಲಾಗಿದೆ.

ಪ್ರಸಿದ್ಧ್ ಕೃಷ್ಣ

ಪ್ರಸಿದ್ಧ್ ಕೃಷ್ಣ ಎರಡನೇ ODI ಪಂದ್ಯದಲ್ಲಿ ತಮ್ಮ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್ ಪಡೆದರು. ಇವರನ್ನು ಮೂರನೇ ಏಕದಿನಕ್ಕೆ ಆಯ್ಕೆ ಮಾಡಲಾಗಿಲ್ಲ.

ಅಕ್ಷರ್ ಪಟೇಲ್

ಆಸ್ಟ್ರೇಲಿಯ ವಿರುದ್ಧದ ಮೂರನೇ ODIಗೆ ಭಾರತದ ತಂಡದಲ್ಲಿ ಅಕ್ಷರ್ ಪಟೇಲ್ ಅವರನ್ನು ಸೇರಿಸಲಾಗಿದೆ. ಆದರೆ, ಇಂಜುರಿಯಿಂದ ಇವರು ಬಳಲುತ್ತಿದ್ದಾರೆ.

ತಿಲಕ್ ವರ್ಮ

ಮೊದಲ ಎರಡು ಏಕದಿನ ಪಂದ್ಯಗಳಿಗೆ ತಿಲಕ್ ವರ್ಮಾ ಆಯ್ಕೆ ಆಗಿದ್ದರು. ಆದರೆ ಅವರು ಭಾರತದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲಿಲ್ಲ.

ಮುಖೇಶ್ ಕುಮಾರ್

ಎರಡನೇ ಏಕದಿನ ಪಂದ್ಯದಲ್ಲಿ ಬುಮ್ರಾ ಬದಲಿಗೆ ಮುಖೇಶ್ ಕುಮಾರ್ ಅವರನ್ನು ಭಾರತ ತಂಡಕ್ಕೆ ಸೇರಿಸಲಾಯಿತು. ಇದೀಗ ಬುಮ್ರಾ ತಂಡ ಸೇರಿಕೊಂಡಿದ್ದಾರೆ.

ಒಂದು ಶತಕ-ಹಲವು ದಾಖಲೆ: ಮುಂದುವರೆದ ಗಿಲ್ ಆರ್ಭಟ