25-09-2023
ಒಂದು ಶತಕ-ಹಲವು ದಾಖಲೆ: ಮುಂದುವರೆದ ಗಿಲ್ ಆರ್ಭಟ
ಗಿಲ್ ಶತಕ
ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ ಶುಭ್'ಮನ್ ಗಿಲ್ 97 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದರು.
ಹಲವು ದಾಖಲೆ
ಈ ಸೆಂಚುರಿಯೊಂದಿಗೆ ಏಕದಿನ ಕ್ರಿಕೆಟಿನ ಹಲವು ದಾಖಲೆಗಳನ್ನು 24 ವರ್ಷದ ಶುಭ್ಮನ್ ಗಿಲ್ ತಮ್ಮದಾಗಿಸಿಕೊಂಡರು. ಇಲ್ಲಿದೆ ಗಿಲ್ ದಾಖಲೆಗಳ ಪಟ್ಟಿ.
6 ಶತಕಗಳ ದಾಖಲೆ
ಟೀಮ್ ಇಂಡಿಯಾ ಪರ ಅತೀ ವೇಗವಾಗಿ 6 ಶತಕಗಳನ್ನು ಬಾರಿಸಿದ ದಾಖಲೆ ಇದೀಗ ಶುಭ್'ಮನ್ ಗಿಲ್ ಪಾಲಾಗಿದೆ.
5 ಸೆಂಚುರಿಗಳ ಸಾಧನೆ
25 ವರ್ಷ ತುಂಬುವ ಮುನ್ನ ಏಕದಿನ ಕ್ರಿಕೆಟಿನಲ್ಲಿ 5+ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಗಿಲ್ ಕೂಡ ಸೇರ್ಪಡೆಯಾಗಿದ್ದಾರೆ.
ವರ್ಷದಲ್ಲಿ ಅಧಿಕ ಶತಕ
ಏಕದಿನ ಕ್ರಿಕೆಟ್ನಲ್ಲಿ ಒಂದೇ ವರ್ಷ 5 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಭಾರತದ 7ನೇ ಬ್ಯಾಟರ್ ಗಿಲ್ ಆಗಿದ್ದಾರೆ.
ಆತ್ಯಧಿಕ ಸೆಂಚುರಿ
ಇನ್ನು 2023 ರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಶುಭ್ಮನ್ ಗಿಲ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಅತ್ಯಧಿಕ ರನ್
ಏಕದಿನ ಕ್ರಿಕೆಟ್ನಲ್ಲಿ ಮೊದಲ 35 ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಕೂಡ ಶುಭ್ಮನ್ ಗಿಲ್ ಪಾಲಾಗಿದೆ.
ಆರಂಭಿಕನಾಗಿ ದಾಖಲೆ
ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಮೊದಲ 30 ಇನಿಂಗ್ಸ್ಗಳಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ದಾಖಲೆ ಕೂಡ ಗಿಲ್ ಹೆಸರಲ್ಲಿದೆ.
ಕೊಹ್ಲಿ-ರೋಹಿತ್ ಟೀಮ್ ಇಂಡಿಯಾ ಸೇರೋದು ಯಾವಾಗ?
ಇನ್ನಷ್ಟು ಓದಿ