24-09-2023
ಕೊಹ್ಲಿ-ರೋಹಿತ್ ಟೀಮ್ ಇಂಡಿಯಾ ಸೇರೋದು ಯಾವಾಗ?
ಭಾರತ-ಆಸೀಸ್
ಭಾರತ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಇಂದು ಇಂದೋರ್'ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ.
ವಿಶ್ರಾಂತಿ
ಏಷ್ಯಾಕಪ್ ಮುಗಿದ ಬೆನ್ನಲ್ಲೆ ಕೊಹ್ಲಿ ಹಾಗೂ ರೋಹಿತ್ ವಿಶ್ರಾಂತಿಯ ಮೊರೆ ಹೋದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಸೇರ್ಪಡೆ ಯಾವಾಗ?
ಕೊಹ್ಲಿ-ರೋಹಿತ್ ವಿಶ್ರಾಂತಿ ಅವಧಿ ಮುಗಿದಿದ್ದು, ಸೆಪ್ಟೆಂಬರ್ 25, ಸೋಮವಾರ ರಾಜ್‌ಕೋಟ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
3ನೇ ಪಂದ್ಯಕ್ಕೆ ಲಭ್ಯ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ.
ಹಾರ್ದಿಕ್-ಕುಲ್ದೀಪ್
ಕೊಹ್ಲಿ-ರೋಹಿತ್ ಜೊತೆಗೆ ವಿಶ್ರಾಂತಿಯಲ್ಲಿರುವ ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ ಕೂಡ ಸೋಮವಾರ ಟೀಮ್ ಇಂಡಿಯಾ ಸೇರಲಿದ್ದಾರೆ.
3ನೇ ಏಕದಿನ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ರಾಜ್‌ಕೋಟ್‌ನಲ್ಲಿ ಸೆಪ್ಟೆಂಬರ್ 27 ರಂದು ನಡೆಯಲಿದೆ.
ಇಂದು 2ನೇ ಏಕದಿನ
ಇಂದು ಇಂದೋರ್ನ ಹೋಲ್ಕರ್ ಕ್ರೀಡಾಂಗಂಣದಲ್ಲಿ ಇಂಡೋ-ಆಸೀಸ್ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ. ಕೆಎಲ್ ರಾಹುಲ್ ನಾಯಕನಾಗಿದ್ದಾರೆ.
ವಿಶ್ವಕಪ್ ಗೆದ್ದ ತಂಡಕ್ಕೆ ಈ ಬಾರಿ ಸಿಗುವ ಹಣವೆಷ್ಟು ಗೊತ್ತೇ?
ಇನ್ನಷ್ಟು ಓದಿ